ಧರ್ಮಾಚರಣೆ ಸರಿಯಾದ ಮಾರ್ಗದಲ್ಲಿರಲಿ

ಬಳ್ಳಾರಿ ಬಿಡಿಎಎ ಸಭಾಂಗಣದಲ್ಲಿ ಸಹಮತ ವೇದಿಕೆಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಕೊಟ್ಟೂರು ಸಂಸ್ಥಾನ ಮಠದ ಶ್ರೀ ಜಗದ್ಗುರು ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣಿ ಸ್ವಾಮೀಜಿ, ಸಹಮತ ವೇದಿಕೆ ಸಂಚಾಲಕ ಸಿರಿಗೇರಿ ಪನ್ನರಾಜ್, ಕ್ರೈಸ್ತ ಧರ್ಮಗುರು ಫಾದರ್ ಐವಾನ್ ಪಿಂಟೋ, ಸಿಖ್ ಧರ್ಮಗುರು ಸುರಿಂದರ್ ಸಿಂಗ್ ಜಿ, ಬೌದ್ಧ ಧರ್ಮದ ಬಿಕ್ಕು ಕಮಲ ರತ್ನ ಬಂತೆಜಿ, ಪ್ರಮುಖರಾದ ಮುನ್ನಾಭಾಯ್, ಅಲ್ಲಾ ಬಕಾಷ್ ಇದ್ದರು.

Published on

ಬಳ್ಳಾರಿ: ಯಾವುದೇ ಧರ್ಮ ಕೆಡುಕನ್ನು ಬೋಧಿಸುವುದಿಲ್ಲ. ಆದರೆ, ಧರ್ಮ ಪಾಲಿಸುವವರು ಸರಿಯಾಗಿ ಆಚರಣೆ ಮಾಡದಿದ್ದರೆ ಸಮಾಜಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಬಸವಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಸಹಮತ ವೇದಿಕೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು. ಪ್ರತಿಯೊಂದು ಧರ್ಮದ ಆಶಯವೇ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವುದು. ಜಗತ್ತಿನ ಯಾವುದೇ ಧರ್ಮ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಜನರು ಧರ್ಮದ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ ಅವಘಡ ಸಂಭವಿಸುತ್ತದೆ ಎಂದರು.

ಮುಸ್ಲಿಂ ಧರ್ಮಗುರು ಮುಪ್ತಿ ಮುಬಿನ್ ಮಾತನಾಡಿ, ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ವಚನಗಳು ಸಮಾಜಮುಖಿಯಾಗಿ ಬದುಕಲು ದಿಕ್ಸೂಚಿಗಳಂತಿವೆ. ಶಾಂತಿ-ಸಹಬಾಳ್ವೆಯ ಬದುಕು ರೂಢಿಸಿಕೊಳ್ಳುವುದು ಹೇಗೆ? ಕಾಯಕದ ಮೂಲಕ ಸಮಾಜವನ್ನು ಸಮೃದ್ಧಗೊಳಿಸುವುದು ಹೇಗೆ ಎಂಬುದನ್ನು ತಿಳಿಸಿದ ವಿಶ್ವಗುರು ಬಸವಣ್ಣ ಸರ್ವರಿಗೂ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.

ಕ್ರೈಸ್ತ ಧರ್ಮಗುರು ಬಿಷಪ್ ಹೆನ್ರಿ ಡಿಸೋಜಾ ಮಾತನಾಡಿ, ಧರ್ಮಗಳ ಮೂಲ ಉದ್ದೇಶ ಶಾಂತಿ, ನೆಮ್ಮದಿ ಹಾಗೂ ಮಾನವನ ಕಲ್ಯಾಣ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಇಲ್ಲಿ ಎಲ್ಲ ಧರ್ಮಗಳು ಸೌಹಾರ್ದತೆಯಿಂದ ಇದ್ದು, ನಾಡಿನ ಪ್ರಗತಿಗಾಗಿ ಪ್ರತಿಯೊಬ್ಬರೂ ಕೊಡುಗೆ ನೀಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net