ಎಲ್ಲರಲ್ಲೂ ರಾಯಣ್ಣನ ದೇಶಭಕ್ತಿ ಬೆಳೆಯಲಿ

18 LXR-6
ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯ ಮೆರವಣಿಗೆಗೆ ಯುವ ಆಂದೋಲನ ಅಧ್ಯಕ್ಷ ಡಾ. ಬಸವರಾಜ ಗೊರವರ ಚಾಲನೆ ನೀಡಿದರು.
Published on

ಲಕ್ಷ್ಮೇಶ್ವರ: ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಶ್ರೀರಾಮನ ಬೃಹತ್ ಮೂರ್ತಿಗಳ ಅದ್ದೂರಿ ಮೆರವಣಿಗೆ ಶುಕ್ರವಾರ ಜರುಗಿತು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಯುವ ಆಂದೋಲನದ ಅಧ್ಯಕ್ಷ ಡಾ. ಬಸವರಾಜ ಎಂ. ಗೊರವರ, ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಜನರನ್ನು ಜಾಗೃತಗೊಳಿಸಿ ನಾಡಿಗಾಗಿ ಹೋರಾಡಿದ ಕೀರ್ತಿ ರಾಯಣ್ಣಗೆ ಸಲ್ಲುತ್ತದೆ. ರಾಯಣ್ಣನ ದೇಶಭಕ್ತಿ ಎಲ್ಲರಲ್ಲಿ ಬೆಳೆಯಬೇಕು. ಅಂತಹ ಸ್ವಾಮಿನಿಷ್ಠ ಮತ್ತೊಮ್ಮೆ ನಾಡಿನಲ್ಲಿ ಜನಿಸಿ ಬರಲಿ ಎಂದು ಆಶಿಸಿದರು.

ಹಳೇ ಬಸ್ ನಿಲ್ದಾಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಪ್ರಾರಂಭದ ಮೆರವಣಿಗೆಯು ಪಂಪ ವೃತ್ತ, ಮ್ಯಾಗೇರಿ ಓಣಿ, ಹಾವಳಿ ಹನುಮಂತ ದೇವಸ್ಥಾನ, ಬಜಾರ್ ರಸ್ತೆ ಮುಖಾಂತರ ಶಿಗ್ಲಿ ನಾಕಾದಲ್ಲಿರುವ ರಾಯಣ್ಣ ವೃತ್ತದ ವರೆಗೂ ಸಕಲ ವಾದ್ಯ ವೃಂದದೊಂದಿಗೆ ಸಾಗಿತು.

ಯುವ ಮುಖಂಡರಾದ ವಿ.ಜಿ. ಪಡಗೇರಿ, ಮಹೇಶ ಹೊಗೆಸೊಪ್ಪಿನ, ಮಂಜುನಾಥ ಮಾಗಡಿ, ನೀಲಪ್ಪ ಪಡಗೇರಿ ಸುನಿಲ ಮಹಾಂತ ಶೆಟ್ಟರ, ವಿಜಯ ಹತ್ತಿಕಾಳ, ಸುರೇಶ ಹಟ್ಟಿ, ಮಂಜುನಾಥ ಘಂಟಿ, ಭಾಗ್ಯಶ್ರೀ ಬಾಬಣ್ಣ, ವಿರೂಪಾಕ್ಷಪ್ಪ ಪಡಗೇರಿ, ಯಲ್ಲಪ್ಪ ಸೂರಣಗಿ, ಶೇಖಣ್ಣ ಕಾಳೆ, ಬಸವರಾಜ ಹೊಗೆಸೊಪ್ಪಿನ, ಲೆಂಕೆಪ್ಪ ಶೇರಸೂರಿ, ಕಾರ್ತಿಕ ಉಪ್ಪಾರ, ಮಂಜುನಾಥ ಮುಳಗುಂದ, ಭರಮಪ್ಪ ಶೇರಸೂರಿ, ಹರೀಶ ಲಕ್ಷ್ಮೇಶ್ವರ, ಲೋಕೇಶ ಸುತಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net