ಪ್ರತಿ ಹಳ್ಳಿಯಲ್ಲೂ ಪಡಿತರ ದೊರೆಯುವಂತಾಗಲಿ

30 08 2025_BGR_RURAL-PAGE_03
ಬಳ್ಳೂರು ಗ್ರಾಮದಲ್ಲಿ ವಿವಿಧ ಗ್ರಾಮಗಳ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಶಾಸಕ ಬಿ ಶಿವಣ್ಣ ಉದ್ಘಾಟಿಸಿದರು. ಸಂಸದ ಡಾ.ಸಿ.ಎನ್​.ಮಂಜುನಾಥ್​, ಗ್ರಾಪಂ ಅಧ್ಯೆ ಮನೋದೇವಿ, ಉಪಾಧ್ಯಕ್ಷ ವಸಂತ್​ ರೆಡ್ಡಿ ಹಾಜರಿದ್ದರು.
Published on

ಆನೇಕಲ್​ : ಪಡಿತರ ಆಹಾರ ಧಾನ್ಯಗಳನ್ನು ಗ್ರಾಮದಲ್ಲೇ ಪಡೆಯುವ ವ್ಯವಸ್ಥೆ ಆಗಬೇಕು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇರಬಾರದು ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಬಳ್ಳೂರು ಗ್ರಾಮ ಪಂಚಾಯಿತಿಯಿಂದ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ಉಚಿತ ಬಸ್​ ಪಾಸ್​, ಹತ್ತು ಕೆ.ಜಿ.ಅಕ್ಕಿ, ಮಹಿಳೆಯರಿಗೆ ಎರಡು ಸಾವಿರ ಹಣ, ಡಿಪ್ಲೊಮಾ ಮಾಡಿರುವವರಿಗೆ ಹಣ, ಉಚಿತ್​ ವಿದ್ಯುತ್​ ನೀಡುತ್ತಿದ್ದು, ಜನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕೆಲಸದಲ್ಲಿ ರಾಜಕಾರಣ ಮಾಡಬಾರದು, ಗ್ರಾಮ ಪಂಚಾಯಿತಿ, ವಿಧಾನಸಭೆ, ಪರಿಷತ್​ ಹಾಗೂ ಲೋಕಸಭಾ ಸದಸ್ಯರು ಉತ್ತಮವಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ ಎಂದರು.

ಸಂಸದ ಸಿ.ಎನ್​.ಮಂಜುನಾಥ್​ ಮಾತನಾಡಿ, ಅಂಗನವಾಡಿ ಕಟ್ಟಡ ಸಮರ್ಪಕವಾಗಿರಬೇಕು. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆದಂತೆ, ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್​ ಹಾಗೂ ವಿಧಾನಸಭೆಯಲ್ಲಿ ಮಹಿಳೆಗೆ ಶೇ.50 ಸ್ಥಾನ ಸಿಗಲಿದೆ, ಮುದ್ರಾ ಯೋಜನೆಯಡಿ 52 ಕೋಟಿ ಸಾಲ ನೀಡಲಾಗಿದೆ. ಮನೆ ಮನೆಗೆ ಗಂಗೆ ಯೋಜನೆಯಿಂದ ಕುಡಿಯುವ ನೀರು ಸಿಗಲಿದೆ. ಬಳ್ಳೂರು ಸರ್ಕಾರಿ ಶಾಲೆಯಲ್ಲಿ 400 ಮಕ್ಕಳಿದ್ದು, ಇಲ್ಲಿಗೆ ಹೆಚ್ಚಿನ ಶಿಕ್ಷಕರ ಅವಶ್ಯಕತೆ ಇದೆ ಎಂದರು. ವಿಧಾನಪರಿಷತ್​ ಸದಸ್ಯ ಗೋಪಿನಾಥರೆಡ್ಡಿ, ಗ್ರಾಪಂ ಅಧ್ಯಕ್ಷ ಮನೋದೇವಿ, ಉಪಾಧ್ಯಕ್ಷ ವಸಂತ್​ರೆಡ್ಡಿ, ಕಾಂಗ್ರೆಸ್​ನ ಹಿರಿಯ ಮುಖಂಡರಾದ ಮುನಿವೀರಪ್ಪ, ನಾರಾಯಣ ಸ್ವಾಮಿ, ಗ್ರಾಪಂ ಸದಸ್ಯರಾದ ಮಧುಕುಮಾರ್​, ಬಿ.ಎನ್​.ಸತೀಶ್​ ರೆಡ್ಡಿ, ಶಿಲ್ಪಾ ಭಾಸ್ಕರ್​, ಸುಪ್ರಿಯಾ, ಲಕ್ಷ$್ಮಮ್ಮ, ಮಂಜುಳಾ, ಡಿ.ಮಂಜುನಾಥ್​, ಬಿ.ನಾರಾಯಣ ಸ್ವಾಮಿ, ವಿ.ವೆಂಕಟೇಶ್​, ವೈ.ಮಂಜುನಾಥ್​, ಹರೀಶ್​ ಅರೇಹಳ್ಳಿ, ಮಾರಪ್ಪ,ಜಿ.ಪಂ ಮಾಜಿ ಸದಸ್ಯ ನಾರಾಯಣ ಸ್ವಾಮಿ, ವಿಜಯಮ್ಮ ಮದನಗಿರಿಯಪ್ಪ, ರೂಪಾವತಿ, ಗಂಗಮ್ಮ, ಸವಿತಾ, ತಾಜುನ್ನೀಸ, ಲತಾ ಗಣೇಶ್​, ಬಿ.ಆರ್​.ಅಶೋಕ ರೆಡ್ಡಿ,ನಾರಾಯಣ ಸ್ವಾಮಿ,ಮುನಿರೆಡ್ಡಿ, ಕಿರಣ್​, ವೀರಭದ್ರಪ್ಪ, ವೇಣು, ಚಂದ್ರೇಶ್​, ಎಂ.ಎಂ.ಟಿ ಮಧು ಮತ್ತಿತರರು ಇದ್ದರು.

ವಿವಿಧ ಕಟ್ಟಡ ಉದ್ಘಾಟನೆ : ಬಳ್ಳೂರು ಗ್ರಾಮದಲ್ಲಿ ನ ತ್ಯಾಜ್ಯ ವಿಲೇವಾರಿ ಟಕ, ಗ್ರಂಥಾಲಯ ಕಟ್ಟಡ, ಶುದ್ಧ ಕುಡಿಯುವ ನೀರಿನ ಟಕ, ಶಶಿಕಲಾ ಅವರ ಜ್ಞಾಪಕಾರ್ತ ಶಾಲಾ ಕಟ್ಟಡ, ದಾಸನಪುರದಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ, ಅರೇಹಳ್ಳಿಯಲ್ಲಿ ಪಡಿತರ ಆಹಾರ ಧಾನ್ಯ ವಿತರಣಾ ಕಟ್ಟಡ ಉದ್ಘಾಟನೆ, ಕೊಡಲಿಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಟಕ ಶಂಕುಸ್ಥಾಪನೆ, ಹಳೇಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ ಮತ್ತು ಶುದ್ಧ ಕುಡಿಯುವ ನೀರಿನ ಟಕ, ಬಳ್ಳೂರಿನಲ್ಲಿ ಅಂಬೇಡ್ಕರ್​ ನಗರದಲ್ಲಿರುವ ಅಂಬೇಡ್ಕರ್​ ಪುತ್ತಳಿ ಕಾಂಪೌಂಡ್​ ಪುನರ್ನವೀಕರಣ, ತ್ರಿಶಕ್ತಿ ಸಂಕ್ಕೆ ಲ್ಯಾಪ್ಟಾಪ್​, ಚೇರ್​ ಹಾಗೂ ಟೇಬಲ್​ ವಿತರಿಸಲಾಯಿತು.

ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರದಿಂದ ಐದು ಹಳ್ಳಿಯಲ್ಲಿ ವಿವಿಧ ಕಾಮಗಾರಿ ಮಾಡಲು ಸಾಧ್ಯವಾಗಿದೆ, ಹಲವಾರು ಜನ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿದ್ದು, ಇದರಿಂದ ಬದಲಾವಣೆಗೆ ಸಹಕಾರ ಆಗಿದೆ. ಗ್ರಾಮಗಳು ಅಭಿವೃದ್ಧಿ ಆದಾಗ ಪಂಚಾಯಿತಿ ಅಭಿವೃದ್ಧಿ ಕಾಣುತ್ತದೆ. > ವಸಂತ್​ ರೆಡ್ಡಿ ಬಳ್ಳೂರು ಗ್ರಾಪಂ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net