ುಣಮಟ್ಟ ರಸ್ತೆ ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ

ನಾಪೋಕ್ಲು ಗ್ರಾಮ ಪಂಚಾಯಿತಿಯಿಂದ ನೀಡಲಾದ ಮಲ ತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕದ ವಾಹನದ ಕೀಲಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್‌ಗೆ ಶಾಸಕರು ಹಸ್ತಾಂತರಿಸಿದರು.
ನಾಪೋಕ್ಲು ಗ್ರಾಮ ಪಂಚಾಯಿತಿಯಿಂದ ನೀಡಲಾದ ಮಲ ತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕದ ವಾಹನದ ಕೀಲಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್‌ಗೆ ಶಾಸಕರು ಹಸ್ತಾಂತರಿಸಿದರು.
Published on

ನಾಪೋಕ್ಲು: ಇಲ್ಲಿನ ಕೊಡವ ಸಮಾಜ ರಸ್ತೆ ಅಭಿವೃದ್ಧಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಅತ್ಯಂತ ಜನಸಂಚಾರ ಹಾಗೂ ವಾಹನ ದಟ್ಟಣೆ ಇರುವ ಈ ರಸ್ತೆಯ ಅಭಿವೃದ್ಧಿಗಾಗಿ 20 ಲಕ್ಷ ರೂ.ಅನುದಾನ ನೀಡಲಾಗಿದ್ದು, ಗುಣಮಟ್ಟ ಕಾಯ್ದುಕೊಂಡು ಶೀಘ್ರ ರಸ್ತೆ ನಿರ್ಮಾಣವಾಗಿ ಜನರ ಬಳಕೆಗೆ ಬರುವಂತಾಗಲಿ ಎಂದರು.

ಇದೇ ಸಂದರ್ಭದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ನೀಡಲಾದ ಮಲ ತ್ಯಾಜ್ಯ ನಿರ್ವಹಣಾ ಸಂಚಾರಿ ಘಟಕ ವಾಹನದ ಕೀಲಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್‌ಗೆ ಶಾಸಕರು ಹಸ್ತಾಂತರ ಮಾಡಿ ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಗ್ರಾಪಂ ಸದಸ್ಯರಾದ ಮಾಚೇಟಿರ ಕುಸು ಕುಶಾಲಪ್ಪ, ಅರುಣ್ ಬೇಬ, ಹೇಮಾವತಿ ಅರುಣ್, ಬಿ.ಎಂ.ಪ್ರತೀಪ, ಟಿ.ಎ.ಅಹಮದ್, ಸಾಬಾ ತಿಮ್ಮಯ್ಯ, ಕೆ.ಎ.ಇಸ್ಮಾಯಿಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ, ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ, ಮಹಿಳಾ ಪರಿಷತ್ ಅಧ್ಯಕ್ಷ ನಿಶಾ ಮೇದಪ್ಪ, ಕ್ರೀಡಾ ಮತ್ತು ಸಂಸ್ಕೃತಿಕ ಸಂಘದ ಅಧ್ಯಕ್ಷ ಬಿದ್ದಾಟಟಡ ತಮ್ಮಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮದ ಉತ್ತಪ್ಪ, ಬಾಚಮಂಡ ಲವ ಚಿನ್ನಪ್ಪ, ನಾಪೋಕ್ಲು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net