ಪ್ರಗತಿ ಕಾರ್ಯಕ್ಕೆ ಸಹಕರಿಸಲಿ ಮಾಜಿ ಸೈನಿಕರಿಗೆ ಶಕ್ತಿ ತುಂಬುವ ಕೆಲಸವಾಗಲಿ

18Sambaragi10
Published on

ಸಂಬರಗಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಕೃಷಿಭೂಮಿ ಸಂಪರ್ಕ ರಸ್ತೆ ಡಾಂಬರೀಕರಣಗೊಳಿಸಿ, ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಜಿಪಂ ಮಾಜಿ ಸದಸ್ಯ ರಾವಸಾಹೇಬ ಬೇವನೂರ ಹೇಳಿದರು.

ಶಿವನೂರ ಗ್ರಾಮದ ಹೊರವಲಯ ಕರಿಯಪ್ಪನ ತೋಟದಲ್ಲಿ ಈಚೆಗೆ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಮಂಜೂರಾಗಿದೆ. ತೋಟದ ರಸ್ತೆಯಿಂದ ಎರಡು ಕಿಮೀ ದೂರದವರೆಗೆ ಜಂಬಗಿ ಸಂಪರ್ಕ ರಸ್ತೆಯನ್ನು ಶೀಘ್ರ ಡಾಂಬರೀಕರಣಗೊಳಿಸಲಾಗುವುದು.

ಯುವಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು ಎಂದರು. ತಮ್ಮಣ್ಣ ಪೂಜಾರಿ, ಕರಣ ಬೇವನೂರ, ಶಿವಾನಂದ ಬೇವನೂರ, ಸಂಗಪ್ಪ ಬೇವನೂರ, ರಾವಸಾಹೇಬ ಬಂಡಗಾರ, ಸಂಭಾಜಿ ವಾಘಮೋಡೆ, ಸಾಗರ ಬೇವನೂರ, ಅರುಣ ವಾಘಮೋಡೆ, ಭಗವಂತ ಬೇವನೂರ ವಿನಾಯಕ ಬೇವನೂರ, ಸಿದ್ರಾಮ ಮಗದುಮ್, ಸುನೀಲ ಚಮಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net