ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ

12
Published on

ಮೈಸೂರು: ನಗರದ ನಯನಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ಭಾಷ್ಯಂ ಸ್ವಾಮಿ ಆಶೀರ್ವಚನ ನೀಡಿದರು.

ಇತ್ತೀಚೆಗೆ ನಡೆದ ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆಯ ವಾತಾರವಣ ಹಾಗೂ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯ ಉತ್ತಮ ರೀತಿಯಲ್ಲಿದೆ. ಇಲ್ಲಿನ ಸೌಲಭ್ಯವನ್ನು ಎಲ್ಲರೂ ಪಡೆಯಬೇಕೆಂದು ತಿಳಿಸಿ ಶುಭಕೋರಿದರು.

ಆಸ್ಪತ್ರೆಯ ಎಂಡಿ ಕೆ.ಬಿ.ಕುಮಾರ್ ಮಾತನಾಡಿ, ವೃತ್ತಿಯಲ್ಲಿ ನಾನು ಗುತ್ತಿಗೆದಾರನಾದರೂ ಸಮಾಜ ಸೇವೆಯ ಮನೋಭಾವದಿಂದ ಈ ಆಸ್ಪತ್ರೆಯನ್ನು ಪ್ರಾರಂಭಿಸಿದ್ದೇನೆ. ಕಡು ಬಡವರಿಗೆ, ಮಧ್ಯಮ ವರ್ಗದವರಿಗೆ ಹಾಗೂ ಎಲ್ಲರಿಗೂ ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎನ್ನುವುದು ನನ್ನ ಉದ್ದೇಶ. ಅದರಂತೆ ಈ ಎರಡು ವರ್ಷದಲ್ಲಿ ಆಸ್ಪತ್ರೆಯಲ್ಲಿ ಸುಮಾರು 1900ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿ ಆಗಿರುವುದಾಗಿ ತಿಳಿಸಿದರು.

ಗುಣಮುಖರಾದವರು ತುಂಬು ಹೃದಯದಿಂದ ನಮ್ಮ ಆಸ್ಪತ್ರೆ ಬಗ್ಗೆ ಮೆಚ್ಚಿ ಅವರು ಸುತ್ತಮುತ್ತಲಿನವರಿಗೆ, ಸ್ನೇಹಿತರಿಗೆ ತಿಳಿಸುತ್ತಿದ್ದಾರೆ. ಈ ಎರಡು ವರ್ಷದ ಯಶಸ್ವಿಗೆ ಕಾರಣರಾದ ವೈದ್ಯರು, ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶಕ್ತಿಧಾಮ ಟ್ರಸ್ಟಿ ಸದಾನಂದ ಮಾತನಾಡಿ, ಈ ಆಸ್ಪತ್ರೆಯು ನಮ್ಮ ಸಂಸ್ಥೆಯ ನಿರಾಶ್ರಿತರು ಹಾಗೂ ಮಕ್ಕಳಿಗೆ ಉಚಿತವಾಗಿ ಆಹಾರ ಮತ್ತು ಆರೋಗ್ಯ ಸೇವೆ ನೀಡುತ್ತಿದ್ದು, ಇದರಿಂದ ನಮ್ಮ ಮಕ್ಕಳು ಯಾವುದೇ ವೆಚ್ಚವಿಲ್ಲದೆ ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಚೇರ‌್ಮನ್ ಗೀತಾ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net