

ರಾಮದುರ್ಗ: ಅಗ್ನಿ ಅವಡಗಳು ಸಂಭವಿಸಿದಾಗ ಇಲಾಖೆಯ ಸಿಬ್ಬಂದಿ ಶ್ರೀ ಸ್ಥಳಕ್ಕೆ ದೌಡಾಯಿಸಿ ಅನಾಹುತ ತಪ್ಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.
ಪಟ್ಟಣದ ಎಂಎಲ್ಬಿಸಿ ಆವರಣದಲ್ಲಿ ಅಗ್ನಿಶಾಮಕ ಠಾಣೆಗೆ ನೂತನವಾಗಿ ನಿರ್ಮಿಸಿದ ಕಟ್ಟಡ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯ ಸಿಬ್ಬಂದಿ ದಿನದ 24 ಗಂಟೆಗಳ ಸಂಪೂರ್ಣ ಜಾಗತರಾಗಿರಬೇಕು. ಅಗ್ನಿ ಅವಡಗಳು ನಡೆದು ಕಾರ್ಯಾಲಯಕ್ಕೆ ಕರೆ ಬಂದ ತಣ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸಿದಲ್ಲಿ ಮಾತ್ರ ಅಧಿಕ ಅನಾಹುತ ತಪ್ಪಿಸಲು ಸಾಧ್ಯವಿದೆ ಎಂದರು.
ಹೆಚ್ಚಿನ ಅನಾಹುತ ತಪ್ಪಿಸಿದಲ್ಲಿ ಮಾತ್ರ ಸಾರ್ವಜನಿಕರಿಂದ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೆಚ್ಚುಗೆ ದೊರೆಯಲು ಸಾಧ್ಯವಿದೆ. ಸರಕಾರದ ಉದ್ದೇಶಗಳ ಇಡೇರಿಕೆಗೂ ಸಿಬ್ಬಂದಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಹುಬ್ಬಳ್ಳಿ ಪ್ರಾದೇಶಿಕ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜುನಾಥ ಸಾಲಿ, ಬೆಳಗಾವಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನೀಲಗಾರ, ಧಾರವಾಡ ಅಗ್ನಿಶಾಮಕ ಅಧಿಕಾರಿ ಗೋವಿಂದಪ್ಪ ತೋರಣಗಟ್ಟಿ, ಮುರಗೋಡ ಠಾಣಾಧಿಕಾರಿ ಬಸವರಾಜ ಕರಲಿಂಗನವರ, ಸವದತ್ತಿ ಠಾಣಾಧಿಕಾರಿ ಮಹಾಂತೇಶಯ್ಯ ಗೋಕಾಕ, ರಾಮದುರ್ಗ ಠಾಣಾಧಿಕಾರಿ ಎಂ.ಎಂ. ಕವಡಿ, ಸಹಾಯಕ ಠಾಣಾಧಿಕಾರಿ ಟಿ.ಡಿ. ವಡ್ಡರ ಇತರರಿದ್ದರು.
8ಆರ್ಎಎಂ1: ರಾಮದುರ್ಗ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಗೆ ನೂತನವಾಗಿ ನಿರ್ಮಿಸಿದ ಕಟ್ಟಡ ಸಂಕೀರ್ಣ ಉದ್ಘಾಟಿಸಲಾಯಿತು. ಶಾಸಕ ಅಶೋಕ ಪಟ್ಟಣ, ಮಂಜುನಾಥ ಸಾಲಿ, ಶಶಿಧರ ನೀಲಗಾರ, ಗೋವಿಂದಪ್ಪ ತೊರಣಗಟ್ಟಿ, ಎಂ.ಎಂ. ಕವಡಿ ಇತರರಿದ್ದರು.