

ಲೋಕಾಪುರ: ಅಪ್ಪಟ ಗ್ರಾಮೀಣ ಕ್ರೀಡೆ ಮಲ್ಲಕಂಬಕ್ಕೆ ಉತ್ತೇಜನ ಸಿಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರಾಷ್ಟ್ರಮಟ್ಟದ ಹಿರಿಯರ ಹಾಗೂ ಕಿರಿಯರ ಮಲ್ಲಕಂಬ ಪಂದ್ಯಾವಳಿ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಲ್ಲಕಂಬ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ ಎಂದರು.
ಪ್ರಾಚಾರ್ಯ ಡಾ.ಮಲ್ಲಯ್ಯ, ಲೋಕಣ್ಣ ಕೊಪ್ಪದ, ಶಿವಾನಂದ ಉದಪುಡಿ, ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಿಕ ಕೆ.ಎಂ.ಶಿರಹಟ್ಟಿ, ಶಿವಾನಂದ ಬಗಲಿ, ಶಿವಾನಂದ ಗಂಗಣ್ಣವರ, ಶಬ್ಬೀರ ಭಾಗವಾನ, ಬಸವರಾಜ ಮಠದ, ಗೋವಿಂದ ಕೌಲಗಿ, ರೇಖಾ ಪಾಟೀಲ, ಬಿ.ಬಿ.ಮಾಯಣ್ಣವರ, ವೆಂಕಣ್ಣ ಕಮಕೇರಿ, ಮಂಜುಳಾ ಕಣವಿ, ಕೆ.ಗಾದಿಲಿಂಗಪ್ಪ, ಡಾ.ಇಸ್ಮಾಯಿಲ್ ನಧಾಪ, ಮಳೆಪ್ಪ ಗಾಣಗೇರ, ಮೂರ್ತಿ ಸಂತೋಷಕುಮಾರ, ಮೂರ್ತಿ ಆರ್‌ಎಂ, ಸಿದ್ದರಾಮಪ್ಪ ಗಾಣಗೇರ, ಶಿವಕುಮಾರ, ಮಲ್ಲಿಕಾರ್ಜುನ ಅಂಗಡಿ, ಹಣಮಂತ ನಿಂಗನಗೌಡರ ಉಪಸ್ಥಿತರಿದ್ದರು.