

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಒಳ್ಳೆಯ ಮನಸ್ಸಿನಿಂದ ತೊಡಗಿಕೊಳ್ಳುವ ಕೆಲಸದಿಂದ ವಿಶ್ವಕರ್ಮ ಸಮಾಜ ಇನ್ನಷ್ಟು ಬೆಳೆಯುವುದರೊಂದಿಗೆ ಅದರ ಲ ಸಮಾಜಕ್ಕೂ ಸಿಗುತ್ತದೆ. ಚಾತುರ್ಮಾಸ್ಯದ ಯಶಸ್ಸಿನಲ್ಲಿ ಸರ್ವರ ಸಹಕಾರವಿದೆ. ಭಕ್ತರ ಸಂಕಲ್ಪವೆಲ್ಲವನ್ನೂ ಪೀಠ ಮಾತೆ ಸರಸ್ವತೀ ದೇವಿ, ವಿಶ್ವಕರ್ಮ ದೇವರು ಅನುಗ್ರಹಿಸಲಿ ಎಂದು ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠಾಧೀಶ್ವರ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠದಲ್ಲಿ ಭಾನುವಾರ ನಡೆದ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಮಾತನಾಡಿದರು. ಪಿಎಚ್.ಡಿ ಪದವಿ ಪಡೆದ ಸಿಂಧೂ ಡಿ.ಜಿ. ಅವರನ್ನು ಸನ್ಮಾನಿಸಲಾಯಿತು. ದ್ವಾದಶ ರಾಶಿ ಪೂಜೆೆಗೆ ಸಹಕರಿಸಿದವರನ್ನು ಗೌರವಿಸಲಾಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಆನೆಗುಂದಿ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಆನೆಗುಂದಿ ಶ್ರೀ ಸರಸ್ವತೀ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಶ್ರೀ ಸರಸ್ವತೀ ಪೂರ್ವಛಾತ್ರ ಸಂಘ ಅಧ್ಯಕ್ಷ ಕೇಶವ ಶರ್ಮಾ ಇರುವೈಲು, ತ್ರಾಸಿ ಸುಧಾಕರ ಆಚಾರ್ಯ, ಕಾಡಬೆಟ್ಟು ನಾಗರಾಜ ಆಚಾರ್ಯ, ಕಳಿ ಚಂದ್ರಯ್ಯ ಆಚಾರ್ಯ, ಪ್ರಭಾಕರ್ ಆಚಾರ್ಯ ಕೋಟೆಕಾರ್, ಗಣೇಶ ಆಚಾರ್ಯ ಕಾಪು, ಜನಾರ್ದನ ಆಚಾರ್ಯ, ಯದುನಂದನ್ ಆಚಾರ್ಯ, ಮೋಹನ್ ಕುಮಾರ್ ಬೊಳ್ಳೂರು, ಸುರೇಶ್ ಆಚಾರ್ಯ ನಿಟ್ಟೆ, ಜಗದೀಶ್ ಆಚಾರ್ಯ ಪಡು ಪಣಂಬೂರು, ಪುರುಷೋತ್ತಮ್ ಆಚಾರ್ಯ ಕಾಂಞಗಾಡ್, ಕೇಶವ ಆಚಾರ್ಯ ಮಂಗಳೂರು ಉಪಸ್ಥಿತರಿದ್ದರು.
ಲೋಕೇಶ್ ಎಂ.ಬಿ.ಆಚಾರ್ ಕಂಬಾರು ಸ್ವಾಗತಿಸಿದರು. ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು. ಗಂಗಾಧರ್ ಆಚಾರ್ಯ ಕೊಂಡೆವೂರು, ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಯ 21ನೇ ವರ್ಷದ ವಿಶ್ವಾವಸು ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಪಡುಕುತ್ಯಾರಿನಲ್ಲಿ ಸೀಮೋಲ್ಲಂಘನದೊಂದಿಗೆ ಪರಿಸಮಾಪ್ತಿಗೊಂಡಿತು. ಬೆಳಗ್ಗೆ ವಿಶ್ವಕರ್ಮ ಯಜ್ಞದ ಪೂರ್ಣಾಹುತಿ, ಪಡುಕುತ್ಯಾರಿನ ಮಠದ ಸಮೀಪದಲ್ಲಿ ಸೀಮೋಲ್ಲಂಘನ, ದಿಗ್ವಿಜಯ ಮೆರವಣಿಗೆ ಮೂಲಕ ಜಗದ್ಗುರು ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿಮಠ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ನಾಗಧರ್ಮೇಂದ್ರ ಸರಸ್ವತೀ ಮಹಾಸ್ವಾಮಿಯ ವೃಂದಾವನ ಸಂದರ್ಶಿಸಿ, ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನ, ಪಡುಕುತ್ಯಾರು ಶ್ರೀ ದುರ್ಗಾದೇವಿ ಮಂದಿರ ಸಂದರ್ಶಿಸಿ, ಮೆರವಣಿಗೆಯಲ್ಲಿ ಪಡುಕುತ್ಯಾರು ಶ್ರೀಮತ್ ಆನೆಗುಂದಿ ಮಠಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಚಿತ್ತೈಸಿದರು. ಶ್ರೀ ಸರಸ್ವತೀ ಗೋಶಾಲೆ ಗೋವುಗಳಿಗೆ ಗೋಪೂಜೆ ಸಲ್ಲಿಸಿದರು. ಆನೆಗುಂದಿ ಪ್ರತಿಷ್ಠಾನ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯಿಂದ ಶ್ರೀಗುರುಪಾದುಕಾ ಪೂಜೆ ಸಲ್ಲಿಸಲಾಯಿತು.