ಮೇ ಸಾಹಿತ್ಯ ಮೇಳದಲ್ಲಿ ಚಿಂತನ-ಮಂಥನ

9-msk-2
ಮಸ್ಕಿಯಲ್ಲಿ ಗುರುವಾರ ಏರ್ಪಡಿಸಿದ್ದ ಮೇ ಸಾಹಿತ್ಯ ಮೇಳದ ಪೂರ್ವಭಾವಿ ಸಭೆಯಲ್ಲಿ ಮೇಳದ ರೂವಾರಿ ಬಸವರಾಜ ಸೂಳೀಬಾವಿ ಮಾತನಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ಮಹಾಂತೇಶ ಬ್ಯಾಳಿ, ಸಿಆರ್‌ಪಿ ರಾಮಸ್ವಾಮಿ, ಪ್ರಮುಖರಾದ ಮಂಜುನಾಥ ಬಿಜ್ಜಳ, ಗುಂಡೂರಾವ್ ದೇಸಾಯಿ, ಮಹೇಶ ಶೆಟ್ಟರ್ ಇತರರಿದ್ದರು.
Published on

ಮಸ್ಕಿ: ಪ್ರಗತಿಪರ ವಿಚಾರವಾದಿಗಳಿಂದ ಜನರ ಮಧ್ಯೆ ಚಿಂತನೆ ನಡೆಸಲು ಸಿಂಧನೂರಿನಲ್ಲಿ ಮೇ 17 ಮತ್ತು 18ರಂದು ಮೇ ಸಾಹಿತ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಮೇಳದ ರೂವಾರಿ ಬಸವರಾಜ ಸೂಳೀಬಾವಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಗುರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಾಹಿತ್ಯ ಸಮ್ಮೇಳನ ಎಂದರೆ ಸಂಭ್ರಮ, ಪ್ರಸಕ್ತ ಕಾಲದ ನೋವು-ನಲಿವುಗಳ ಚಿಂತನ ಮಂಥನ ಇರಲಿದೆ. ಬದಲಾವಣೆಯ ಬೀಜ ಬಿತ್ತಿ ಫಸಲಿಗಾಗಿ ಕಾಯಬೇಕು ಎಂದರು.

ಸಾಹಿತಿ ಸಿ.ದಾನಪ್ಪ ಮಾತನಾಡಿ, ಮೇ ಸಾಹಿತ್ಯ ಮೇಳದಲ್ಲಿ ಮೆದಕಿನಾಳ ಭೂ ಹೋರಾಟದ ಮಹಿಳೆಯಿಂದ ಉದ್ಘಾಟನೆ ಮಾಡಿಸುತ್ತಿದ್ದೀರಿ, ಆದರೆ, ಮೆದಕಿನಾಳ ಭೂ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ, ತಾಲೂಕು ಅಧ್ಯಕ್ಷ ಮಹಾಂತೇಶ ಬ್ಯಾಳಿ, ಸಿಆರ್‌ಪಿ ರಾಮಸ್ವಾಮಿ, ಪ್ರಮುಖರಾದ ಮಂಜುನಾಥ ಬಿಜ್ಜಳ, ಗುಂಡೂರಾವ್ ದೇಸಾಯಿ, ಮಹೇಶ ಶೆಟ್ಟರ್, ವೀರೇಶ ಸೌದ್ರಿ, ದೇವೇಂದ್ರಗೌಡ, ದಯಾನಂದ ಜೋಗಿನ್, ದೊಡ್ಡಪ್ಪ ಮುರಾರಿ, ಸಿದ್ದಾರಡ್ಡಿ ಗಿಣಿವಾರ, ಪಂಪಾಪತಿ ಹೂಗಾರ, ಬಸನಗೌಡ, ಬಾಲಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net