ಕನ್ನಡ ನಿತ್ಯದ ಹಬ್ಬವಾಗಲಿ

sports inaguration in Prerana pu Collage
Published on

ಹುಬ್ಬಳ್ಳಿ : ಇಲ್ಲಿನ ಕೆಎಲ್​ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಕನ್ನಡ ಭಾಷೆಯ ಮಹತ್ವ ವಿವರಿಸಿದರು. ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಲ್ಲ. ಕನ್ನಡ ನಿತ್ಯದ ಹಬ್ಬವಾಗಲಿ ಎಂದರು.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಕನ್ನಡ ನಾಡು ವೈಭವದ ಇತಿಹಾಸವುಳ್ಳ ನಾಡಾಗಿದೆ. ಸಿರಿ ಸಂಸ್ಕೃತಿಯ ಬೀಡಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಕುಮಾರಸ್ವಾಮಿ ಮೇವುಂಡಿಮಠ ಮಾತನಾಡಿ, ಕನ್ನಡ ಭಾಷೆಯನ್ನು ಹೆಚ್ಚುಹೆಚ್ಚಾಗಿ ಬೆಳೆಸೋಣ, ಹಾಗೆಯೇ ಎಲ್ಲ ಭಾಷೆಗಳನ್ನು ಗೌರವಿಸೋಣ. ನಾವು ಯಾವ ಭಾಷೆಯನ್ನು ಹೆಚ್ಚಾಗಿ ಬಳಸುತ್ತೇವೆಯೋ ಆ ಭಾಷೆ ಬೆಳೆಯುತ್ತದೆ ಎಂದರು.

ಕ್ರೀಡಾ ಜ್ಯೋತಿಯೊಂದಿಗೆ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಕರಾಟೆ ಹಾಗೂ ಈಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಹಾವಿದ್ಯಾಲಯದ ಸಂಯೋಜಕ ಪ್ರೊ. ಅಜಿತ ಚೊಂಚಣ್ಣವರ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸಿದ್ದಲಿಂಗಮ್ಮ ಹಿರೇಮಠ, ಇಂಗ್ಲಿಷ ವಿಭಾಗದ ಮುಖ್ಯಸ್ಥೆ ಡಾ. ಚಂದ್ರಾಣಿ ಮುಜಮದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net