ಜಗತ್ತಿಗೆ ಉನ್ನತ ಕೂಡುಗೆ ನೀಡುವುದು ಕರ್ತವ್ಯವಾಗಲಿ

sri-4[1]
Published on

ಶೃಂಗೇರಿ: ಅತ್ಯಪ್ತ ವಯಸ್ಸಿನಲ್ಲಿ ಜಗದ್ಗುರು ಶ್ರೀ ಶಂಕರರು ಲೋಕಕ್ಕೆ ಮಾಡಿದ ಕಾರ್ಯ 32 ಯುಗಗಳು ಕಳೆದರೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಶ್ರೀ ಮಠದ ಆವರಣದಲ್ಲಿ ಶಂಕರ ಜಯಂತಿ ಪ್ರಯುಕ್ತ ವಿವಿಧ ಪ್ರಾಂತ್ಯಗಳಿಂದ ಆಗಮಿಸಿ ಬಾಲ ಶಂಕರ ರೂಪಧಾರಣೆ ಮಾಡಿದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳು ಮಹಾಮಹೀಮರ ವೇಷಭೂಷಣ ಧರಿಸಿದ್ದಾಗ ಅವರಲ್ಲಿ ವಿವೇಚನೆ ಬೆಳೆಯಲು ಸಾಧ್ಯ ಅವರ ವ್ಯಕ್ತಿತ್ವದಂತೆ ನಾವು ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳು ತಮ್ಮ ಆಚರಣೆಯಲ್ಲಿ ರೂಪಿಸಿಕೊಳ್ಳಬೇಕು ಎಂದರು.

ಗುರುಗಳು ನೀಡಿದ ಮಾರ್ಗದರ್ಶನದಲ್ಲಿ ಶ್ರೀಶಂಕರರು ಮುನ್ನಡೆದರು. ಗುರುಗಳು ತಿಳಿಸಿದ ಪ್ರಜ್ಞಾನವನ್ನು ಸಂಯಮದಿಂದ ಅಳವಡಿಸಿಕೊಂಡು 32 ವರ್ಷಗಳಲ್ಲಿ ಅವರು ಮಾಡಿದ ಅದ್ಭುತ ಸಾಧನೆ ಆದರ್ಶನೀಯ. ಸಮಾಜದಲ್ಲಿ ಉತ್ತಮ ಮಾರ್ಗದಲ್ಲಿ ಸಾಗಿ ಜಗತ್ತಿಗೆ ಉನ್ನತ ಕೊಡುಗೆ ನೀಡುವುದು ಸರ್ವರ ಕರ್ತವ್ಯವಾಗಬೇಕು ಎಂದು ಹೇಳಿದರು.

ವಿವಿಧ ಪ್ರಾಂತ್ಯಗಳಿಂದ ಆಗಮಿಸಿದ 500ಕ್ಕೂ ಹೆಚ್ಚು ಮಕ್ಕಳು ಬಾಲಶಂಕರರ ರೂಪ ಧರಿಸಿ ಸರ್ವರ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net