ಸಂಕೇಶ್ವರ: ಸಹಕಾರ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಯುವನಾಯಕ ವಿನಯ ಪಾಟೀಲ ಅವರು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಹುಕ್ಕೇರಿ ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಹಾರೈಸಿದರು.
ಪಟ್ಟಣದ ಎಸ್‌ಡಿವಿಎಸ್ ಸಂಘದ ಸಭಾಭವನದಲ್ಲಿ ಸಂಘದ ಸ್ಥಾನಿಕ ಸಮಿತಿ ಅಧ್ಯಕ್ಷ ವಿನಯ ಪಾಟೀಲ ಜನ್ಮದಿನ ನಿಮಿತ್ತ ಶನಿವಾರ ಜೈ ಹಿಂದ ಆರ್ಮಿ ಟ್ರೇನಿಂಗ್ ಅಕಾಡೆಮಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೇನೆ ಸೇರುವ ಶಿಬಿರಾರ್ಥಿಗಳಿಗೆ ತರಬೇತಿ ಕೇಂದ್ರ ಆರಂಭಿಸಿ ವಿನಯ ಪಾಟೀಲ ಅವರು ತಂದೆ, ಮಾಜಿ ಸಚಿವ ಎ.ಬಿ.ಪಾಟೀಲ ಹಾಗೂ ಅಜ್ಜ ದಿ.ಬಸಗೌಡ ಪಾಟೀಲ ಅವರ ಕನಸು ಮಾಡಿದ್ದಾರೆ ಎಂದರು.
ಪಟ್ಟಣದ ಕಲಾ, ವಿಜ್ಞಾನ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಹೂವು ಕುಂಡಗಳ ಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ವಿನಯ ಪಾಟೀಲ ಜನ್ಮದಿನ ಆಚರಿಸಿಕೊಂಡರು.
ಸಂಘದ ಉಪಾಧ್ಯಕ್ಷ ಕೆ.ಸಿ.ಶಿರಕೋಳಿ, ಸಂಘದ ನಿರ್ದೇಶಕರಾದ ವಿಜಯ ರವದಿ, ಆರ್.ಬಿ.ಪಾಟೀಲ, ಸಂತೋಷ ಪಾಟೀಲ, ವಿ.ಬಿ.ತೋಡಕರ, ಬಿ.ಎಸ್.ವೈರಾಗಿ, ಭರಮಗೌಡ ಪಾಟೀಲ, ಡಾ.ಗಣೇಶ ಪಾಟೀಲ, ಆಡಳಿತಾಧಿಕಾರಿ ಬಿ.ಎ.ಪೂಜಾರ, ಪ್ರಾಚಾರ್ಯೆ ಸರ್ವಮಂಗಳಾ ಯರಗಟ್ಟಿ, ರಾಜು ಕಮತೆ, ಅಪ್ಪಾಸಾಹೇಬ ಪಾಟೀಲ, ಶಾಂತೇಶಗೌಡ ಪಾಟೀಲ, ಸುಭಾಷ ಕಾಸರಕರ, ಮಹಾಂತೇಶ ಹಿರೇಮಠ, ರಾಜು ಮುಲ್ಲಾ, ಮಲ್ಲಪ್ಪ ಚೌಗಲಾ, ಮನೋಹರ ಚಿಂಚೇವಾಡಿ, ಅಭಿಮಾನಿಗಳು ಇತರರಿದ್ದರು.