ಮಾನವೀಯ ಮೌಲ್ಯ, ಸೋದರತ್ವ ಬಲಗೊಳ್ಳಲಿ

07 GJD1
Published on

ಗಜೇಂದ್ರಗಡ: ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಬಕ್ರೀದ್ ಸಾರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಚೇರ್ಮನ್ ಹಸನಸಾಬ್ ತಟಗಾರ ಹೇಳಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ ಹಬ್ಬದ ನಮಾಜ್ ಬಳಿಕ ಮಾತನಾಡಿದ ಅವರು, ಹಜರತ್ ಇಬ್ರಾಹಿಂ ಅವರ ಅಲ್ಲಾನ ಮೇಲಿನ ದೈವಭಕ್ತಿ, ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಕುರ್ಬಾನಿ ಅರ್ಪಿಸಲಾಗುತ್ತದೆ ಎಂದರು.

ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ್ ತಾಳಿಕೋಟಿ, ಮಾಜಿ ಚೇರ್ಮನ್ ಎ.ಡಿ. ಕೋಲಕಾರ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ಫಯಾಜ್ ತೋಟದ ಮಾತನಾಡಿದರು. ಜಾಮಿಯಾ ಮಸೀದಿಯ ಮೌಲಾನಾ ಖಲೀಲ್ ಅಹ್ಮದ್ ಖಾಜಿ ಮೌಲಾನ ನಮಾಜ್, ಟೆಕ್ಕೇದ ದರ್ಗಾದ ಹಜರತ್ ನಿಜಾಮುದ್ದೀನ್ ಆಶ್ರಫಿ, ಖಲೀಲ್ ಅಹ್ಮದ್ ಖಾಜಿ ಮೌಲಾನ, ರಫೀಕ್ ಹಾಳಗಿ, ಯಾಸೀನ ಮೌಲಾನ, ನಿರ್ದೇಶಕರಾದ ಮುರ್ತುಜಾ ಡಾಲಯತ, ಸುಭಾನಸಾಬ್ ಆರಗಿದ್ದಿ, ಫಯಾಜ್ ತೋಟದ, ಗಫರ್ ಡಾಲಯತ, ಎಸ್.ಎಂ. ಸಯ್ಯದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net