ಪ್ರತಿ ಮನೆಯಲ್ಲೂ ವೀರವನಿತೆಯರು ಜನಿಸಲಿ

Ganeshotsava Festival
Published on

ಅಕ್ಕಿಆಲೂರ: ಧರ್ಮನಿಷ್ಠೆ ಮತ್ತು ದೇಶಾಭಿಮಾನ ಪ್ರತಿಯೊಬ್ಬ ಹಿಂದುಗಳ ಮೊದಲ ಆದ್ಯತೆಯಾಗಬೇಕು ಎಂದು ಹಿಂದು ಜಾಗರಣಾ ವೇದಿಕೆ ಉತ್ತರ ಪ್ರಾಂತ ಸಹ ಸಂಯೋಜಕ ಶ್ರೀಕಾಂತ ಹೊಸಕೇರಾ ಹೇಳಿದರು.

ಪಟ್ಟಣದ ಹಿಂದು ಯುವಸೇನೆಯಿಂದ ಪ್ರತಿಷ್ಠಾಪಿಸಿದ ಹಿಂದು ಮಹಾಗಣಪತಿ ಗಣೇಶೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು. ‘ಭಾರತದ ಇತಿಹಾಸದಲ್ಲಿ ಇಸ್ಲಾಂ ಆಕ್ರಮಣಕಾರರು, ಸನಾತನ ಸಂಸ್ಕೃತಿಗಳ ಮೇಲೆ ಹಲವು ದಾಳಿ ಮಾಡಿದರೂ ನಮ್ಮ ಸಂಸ್ಕೃತಿ ಸುಭದ್ರವಾಗಿದೆ. ಗಣೇಶನ ಮೇಲೆ ಕಲ್ಲು ತೂರುವ ವಿಕೃತ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಬೇಕು. ಮನೆಮನೆಯಲ್ಲಿ ಝಾನ್ಸಿ ರಾಣಿ ಲಕ್ಷಿ್ಮೕಬಾಯಿ, ರಾಣಿ ಚನ್ನಮ್ಮ, ಒನಕೆ ಓಬವ್ವರಂತಹ ದಿಟ್ಟ ಮಹಿಳೆಯರು ಹುಟ್ಟಿದಾಗ ಮಾತ್ರ ಲವ್ ಜಿಹಾದ್ ನಿಲ್ಲುವುದಲ್ಲದೆ, ಹಿಂದುತ್ವ ಮತ್ತಷ್ಟು ಗಟ್ಟಿಯಾಗುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ಅನೇಕ ಮುಸ್ಲಿಂ ರಾಷ್ಟ್ರದಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಸ್ಥಿತಿ ಚಿಂತಾಜನಕವಾಗಿದೆ. ಆ ವಾತಾವರಣ ಭಾರತದಲ್ಲಿ ನಿರ್ವಣವಾಗುವುದಕ್ಕೂ ಮೊದಲು ಹಿಂದು ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದರು.

ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಗಿರೀಶ ಕರಿದ್ಯಾವಣ್ಣನವರ ಅವರಿಗೆ ವನ್ಯಜೀವಿ ರಕ್ಷಕ ಪ್ರಶಸ್ತಿ ನೀಡಲಾಯಿತು. ನಂತರ ಬಾಲಕರ ಛಷ್ಮವೇಷ ಕಾರ್ಯಕ್ರಮ ಜರುಗಿತು. ಸಂಘದ ಅಧ್ಯಕ್ಷ ಪವನ ಜಾಬಿನ, ಪ್ರಮೋದ ದೇಸಾಯಿ, ರಾಜಣ್ಣ ಗೌಳಿ, ಕೃಷ್ಣಾ ಈಳಿಗೇರ, ಪ್ರಕಾಶಗೌಡ ಪಾಟೀಲ ಸೇರಿ ವಿವಿಧ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net