

ಕೆರೂರ: ಸರ್ಕಾರಿ ಇಲಾಖೆಯಲ್ಲಿ ಸಲ್ಲಿಸುವ ಸೇವೆ ಸಾರ್ವಜನಿಕರಿಗೆ ತೃಪ್ತಿಕರವಾಗಿರಬೇಕು ಎಂದು ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಹೇಳಿದರು.
ಸ್ಥಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಗಣಿಸಾಬ್ ನಧ್ಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಧ್ಾ ಅವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕ ಶ್ರದ್ಧೆಯಿಂದ ನಿಭಾಯಿಸಿದ್ದಾರೆ. ಅವರ ನಿವೃತ್ತಿ ನಂತರದ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಗಣಿಸಾಬ್ ನಧ್ಾ ಮಾತನಾಡಿ, 30 ವರ್ಷಗಳ ಸುಧೀರ್ಘ ಸೇವೆ ನನಗೆ ಸಂತೃಪ್ತಿ ತಂದಿದೆ ಎಂದರು. ಕಿರಿಯ ಇಂಜಿನಿಯರ್ ಎಂ.ಎ. ನಧ್ಾ ಮಾತನಾಡಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ್ ಚಿಕ್ಕೂರ, ಗೋಪಾಲ ಪೂಜಾರ, ಬಸವರಾಜ ಕಟ್ಟಿಮನಿ, ನವೀನ ಮಾಹಜನ್ನನವರ, ಅಶ್ವಥನಾರಾಯಣ ರಂಗನಗೌಡ್ರ, ಷಣ್ಮುಖ ತೇಲಿ, ಸಂಗಮೇಶ ಮಾದರ, ಎಂ.ಆರ್. ಕೆರೂರ ಮತ್ತಿತರರಿದ್ದರು.