ಗದಗ ಜಿಲ್ಲೆ ಅಪರಾಧಮುಕ್ತವಾಗಲಿ

LXR SP
Published on

ಲಕ್ಷ್ಮೇಶ್ವರ: ಎಲ್ಲ ಸಮುದಾಯದವರು ಇತರ ಸಮಾಜದೊಂದಿಗೆ ಪರಸ್ಪರ ಸ್ನೇಹ, ಸೌಹಾರ್ದದಿಂದ ಬಾಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಉದ್ದೇಶಿಸಿ ಮಾತನಾಡಿದರು. ಗದಗ ಜಿಲ್ಲೆ ಅಪರಾಧಮುಕ್ತವಾಗಬೇಕು ಮತ್ತು ಸಾರ್ವಜನಿಕರು ನೆಮ್ಮದಿ ಜೀವನ ನಡೆಸಬೇಕು. ಪಟ್ಟಣ, ಗ್ರಾಮೀಣ ಭಾಗದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳೇ ನೇರವಾಗಿ ಹೋಗಿ ಮಾತುಕತೆಯೊಂದಿಗೆ ಬಗೆಹರಿಸಬೇಕು. ಇದಕ್ಕೆ ಆಯಾ ಸಮಾಜದ ಮುಖಂಡರ ಸಹಕಾರ ಅಗತ್ಯವಾಗಿದೆ ಎಂದರು.

ಪಟ್ಟಣ ಸಂಪರ್ಕಿಸುವ ರಸ್ತೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಳೆದ ವರ್ಷದಿಂದ ಥರ್ಡ್ ಹೈ ಕ್ಯಾಮರಾ ಅಳವಡಿಸಿದ ಮೇಲೆ ಜಿಲ್ಲೆಯಲ್ಲಿ ಕಳವು ಪ್ರಕರಣ ಕಡಿಮೆಯಾಗಿವೆ ಎಂದರು.

ಎಸ್‌ಸಿ, ಎಸ್‌ಟಿ ಮುಖಂಡರು ಮಾತನಾಡಿ, ಕೆಲ ಗ್ರಾಮಗಳ ಹೋಟೆಲ್, ಕ್ಷೌರದ ಅಂಗಡಿಗಳಲ್ಲಿ ಸಮುದಾಯದ ಜನರಿಗೆ ಮೀನಮೇಷ ಮಾಡುತ್ತಿದ್ದಾರೆ. ಸಮುದಾಯದ ಜನರಿಗೆ ಸ್ಮಶಾನ ಭೂಮಿ ಸಮಸ್ಯೆಯಿದೆ ಎಂದರು.

ಜಯಮ್ಮ ಕಳ್ಳಿ, ಸುರೇಶ ನಂದೆಣ್ಣವರ, ಪಿ.ಬಿ. ಕರಾಟೆ, ಫಕೀರೇಶ ಮ್ಯಾಟಣ್ಣವರ, ರಾಮಣ್ಣ ಲಮಾಣಿ (ಶಿಗ್ಲಿ ), ಯಲ್ಲಪ್ಪ ತಳವಾರ, ಎನ್.ಆರ್. ಸಾತಪುತೆ, ಜಗದೀಶ ಹುಲಿಗೆಮ್ಮನವರ, ಟಾಕಪ್ಪ ಸಾತಪುತೆ, ಕೆ.ಒ. ಹುಲಿಕಟ್ಟಿ, ಕಾರ್ತಿಕ ದೊಡ್ಡಮನಿ, ಮಲ್ಲೇಶ ಮಣ್ಣಮ್ಮನವರ, ಮಂಜುನಾಥ ಶೀತಮ್ಮನವರ, ಫಕೀರೇಶ ಭಜಕ್ಕನವರ, ಸಂತೋಷ ನಂದೆಣ್ಣವರ, ಸಂತೋಷ ಹಾದಿಮನಿ, ಪರಮೇಶ ಹಳೇರಿತ್ತಿ, ಹನುಮಪ್ಪ ಹರಿಜನ, ಮಹಾಂತೇಶ ಮುಶೆಪ್ಪನವರ ಇತರರು ಇದ್ದರು.

ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net