ಅನ್ನ, ಅರ, ಆರೋಗ್ಯ ಎಲ್ಲರಿಗೂ ದೊರೆಯಲಿ

May food, shelter and health be available to all.
ಗೊಳಸಂಗಿ ಗ್ರಾಮ ಪಂಚಾಯಿತಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೇಶವ ಪವಾರ, ಎಂ.ಬಿ.ಹಾವರಗಿ, ರಾಜಶೇಖರ ರೂಡಗಿ ಇತರರಿದ್ದರು.
Published on

ಗೊಳಸಂಗಿ: ಜಾತಿ, ಮತ, ಪಂಥದ ಬೇಲಿಯನ್ನು ದಾಟಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನ್ನ, ಅರ ಮತ್ತು ಆರೋಗ್ಯ ಸುಲಭವಾಗಿ ದೊರೆಯುವಂತಾಗಬೇಕೆಂಬುದು ಸಂವಿಧಾನದ ಆಶಯವಾಗಿದೆ ಎಂದು ಪಿಡಿಒ ಮಲ್ಲಿಕಾರ್ಜುನ ಹಾವರಗಿ ಅಭಿಪ್ರಾಯಪಟ್ಟರು.

ಸ್ಥಳಿಯ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಬಿ.ಆರ್​.ಅಂಬೇಡ್ಕರ್​, ಸಂವಿಧಾನದ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯ ಕೇಶವ ಪವಾರ ಅಧ್ಯತೆ ವಹಿಸಿದ್ದರು.

ಗ್ರಾಪಂ ಸದಸ್ಯ ರಾಜಶೇಖರ ರೂಡಗಿ, ಪ್ರಮುಖರಾದ ಅಮರೇಶಗೌಡ ಪಾಟೀಲ, ಚನ್ನಮಲ್ಲ ಉಳ್ಳಿ, ಚಂದ್ರಶೇಖರ ಕಲಾದಗಿ, ಸುನಂದಾ ರೂಡಗಿ, ಶಿಲ್ಪಾ ಗುಳೇದಗುಡ್ಡ, ರವಿ ಬುಜಂಗೋಳ, ದುಂಡೇಶ ಮಮದಾಪೂರ, ಚನ್ನಮಲ್ಲ ಗುಡ್ಡದ, ಪತ್ತೇಸಾಬ ಖುರೇಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net