

ಸವಣೂರ: ತಾಲೂಕಿನ ಕುರುಬರಮಲ್ಲೂರ (ಪ್ಲಾಟ್) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಗ್ರಾಪಂ ಸದಸ್ಯ ಅನಿಲಕುಮಾರ ಹೊಂಬಳದ ಸಸಿ ನೆಟ್ಟು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಸಿ ನೆಟ್ಟು ಬೆಳೆಸಲು ವಿವಿಧ ಕಾರಣ ನೀಡುವ ಬದಲಾಗಿ ಪ್ರತಿಯೊಬ್ಬರು ಆತ್ಮಸಾಕ್ಷಿಯಿಂದ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಲಯಾಧಿಕಾರಿ ರವೀಂದ್ರ, ಕೃಷಿ ಅಧಿಕಾರಿ ಮಂಜುನಾಥ, ಸೇವಾ ಪ್ರತಿನಿಧಿ ರೂಪಾ ನಾಯಕ, ಮುಖ್ಯ ಶಿಕ್ಷಕ ಬಿ.ಕೆ. ಭಗವಂತಗೌಡ್ರ, ಸಹ ಶಿಕ್ಷಕಿ ಗೀತಾ ವಡ್ಡರ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಮೂಲಿಮನಿ, ಇತರರಿದ್ದರು.