ಕಾರ್ಖಾನೆ ಪ್ರಗತಿಗೆ ಎಲ್ಲರ ಸಹಕಾರವಿರಲಿ

16Snk1
Published on

ಸಂಕೇಶ್ವರ: ನಷ್ಟದಲ್ಲಿದ್ದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಂಚಾಲಕರ ಮನವಿ ಮೇರೆಗೆ ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ಬೀರೇಶ್ವರ ಸಹಕಾರಿ ಸಂ ಹಾಗೂ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಹಣಕಾಸು ನೆರವು ನೀಡಿ ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಇನ್ನಷ್ಟು ಸುಧಾರಣೆಯಾಗಬೇಕಾದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಬೇಕು ಮತ್ತು ಕಾರ್ಮಿಕರು ಸಕಾಲಕ್ಕೆ ಕಬ್ಬು ನುರಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಮನವಿ ಮಾಡಿದರು.

ಪಟ್ಟಣದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ 2025&26ನೇ ಸಾಲಿನ 66ನೇ ಕಬ್ಬು ನುರಿಸುವ ಹಂಗಾಮಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಕಾರ್ಖಾನೆ ಇತ್ತೀಚಿನ ವರ್ಷಗಳಲ್ಲಿ ಭಾರಿ ನಷ್ಟ ಅನುಭವಿಸಿ ಕಬ್ಬಿನ ಬಿಲ್​ ಹಾಗೂ ಕಾರ್ಮಿಕರಿಗೆ ನಿಗದಿತವಾಗಿ ವೇತನ ನೀಡಲಾಗದ ಪರಿಸ್ಥಿತಿಯಿತ್ತು. ಪರಿಸ್ಥಿತಿ ಬದಲಾಗಿ ಕಾರ್ಖಾನೆ ಈಗ ಸುಧಾರಣೆ ದಾರಿಯಲ್ಲಿದೆ. ಕಾರ್ಖಾನೆ ರೈತರು ಹಾಗೂ ಕಾರ್ಮಿಕರ ಅನುಕೂಲಕ್ಕಾಗಿ 10 ಲ ರೂ. ಅಪಘಾತ ಮತ್ತು 2 ಲಕ್ಷ ರೂ. ಆರೋಗ್ಯ ವಿಮೆ ಜಾರಿಗೆ ತರಲಿದೆ ಎಂದರು.

ಕಾರ್ಖಾನೆ ಅಧ್ಯ ಬಸವರಾಜ ಕಲ್ಲಟ್ಟಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 12ಲ ಮೆಟ್ರಿಕ್​ ಟನ್​ ಕಬ್ಬು ನುರಿಸುವ ಗುರಿಯಿದ್ದು, ರೈತರು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಬೇಕು. ದೀಪಾವಳಿ ಸಂದರ್ಭದಲ್ಲಿ ಕಾರ್ಮಿಕರಿಗೆ ಶೇ.8.33 ಬೋನಸ್​ ನೀಡಲಾಗುವುದು ಎಂದರು.

ನಿಡಸೋಸಿ ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ೂಡಗೇರಿ ಮಲ್ಲಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪಾಧ್ಯ ಅಶೋಕ ಪಟ್ಟಣಶೆಟ್ಟಿ, ಕಾರ್ಖಾನೆ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಂದ್ರ ದೊಡ್ಡಲಿಂಗನವರ, ಬಸಪ್ಪ ಮರಡಿ, ಮಲ್ಲಿಕಾರ್ಜುನ ಪಾಟೀಲ, ಸುರೇಶ ರಾಯಮಾನೆ, ಶಾರದಾ ಪಾಟೀಲ, ಭಾರತಿ ಹಂಜಿ, ಸಂಗಮ ಕಾರ್ಖಾನೆ ಅಧ್ಯ ರಾಜೇಂದ್ರ ಪಾಟೀಲ, ಮುಖಂಡರಾದ ಶ್ರೀಕಾಂತ ಹತನೂರಿ, ಶಂಕರರಾವ ಹೆಗಡೆ, ಜಿಎಂ ವೀರನಗೌಡ ದೇಸಾಯಿ, ಅಧೀಕ ಪ್ರಭಾಕರ ಡಬನ್ನವರ, ಲಕ್ಷ$್ಮಣ ಹಂಚಿನಮನಿ, ಮಹಾದೇವ ಹಂಜಿ ಇತರರಿದ್ದರು.

16ಎಸ್​ಎನ್​ಕೆ1: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮಿಗೆ ನಿಡಸೋಸಿ ಮಠದ ಪಂಚಮ ಡಾ.ಶಿವಲಿಂಗೇಶ್ವರ ಸ್ವಾಮೀಜಿ, ೂಡಗೇರಿ ಮಲ್ಲಯ್ಯ ಸ್ವಾಮೀಜಿ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಇತರರು ಚಾಲನೆ ನೀಡಿದರು. ಬಸವರಾಜ ಕಲ್ಲಟ್ಟಿ, ಅಶೋಕ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net