

ಕಲಘಟಗಿ: ಸಿಡಿಲ ಸಂತ, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಸಮೃದ್ಧ, ಬಲಿಷ್ಠ ಭಾರತ ಕಟ್ಟುವ ಕನಸನ್ನು ಇಂದಿನ ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರವೀಂದ್ರ ದೊಡ್ಡಮೇಟಿ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದ ಹನ್ನೆರಡು ಮಠದ ಷ.ಬ್ರ ಶ್ರೀ ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯಾವಸ್ಥೆಯಲ್ಲಿಯೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಮೂಡಿಸಲು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ತಿಳಿಸಿ ಹೇಳುವ ಕೆಲಸವಾಗಬೇಕು ಎಂದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಶ್ವಿನಿ ಬಡಿಗೇರ, ಶ್ರೀನಿಧಿ ರಾಠೋಡ, ನಿರ್ಮಲಾ ಬಿಜ್ಜೂರ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಚೇರ್ಮನ್ ಎನ್.ಎಚ್. ಪಾಟೀಲ, ಕಾರ್ಯದರ್ಶಿ ಕೆ.ಬಿ. ಪಾಟೀಲಕುಲಕರ್ಣಿ, ಆಡಳಿತ ಮಂಡಳಿ ಸದಸ್ಯ ಎಸ್.ಎಸ್. ಸಾವಕಾರ, ಎಂ.ಎ. ವರದಾನಿ, ಆರ್.ಎಲ್. ಕುಲಕರ್ಣಿ, ನೀಲಾಂಬಿಕಾ ಪಾಟೀಲ, ಕಸ್ತೂರಿ ದೊಡ್ಡಮೇಟಿ, ಕೆ.ಆಯ್. ಕೊಂಗಿ, ಇತರರಿದ್ದರು.