ಪ್ರತಿ ವಿದ್ಯಾರ್ಥಿ ಸಮಾಜಕ್ಕೆ ಸಂತೋಷ ನೀಡಲಿ

14 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾವು ಕಲಿಸಿದ ವಿದ್ಯಾಥಿರ್ಗಳು ಸಮಾಜಕ್ಕೆ ಸಂತೋಷ ಕೊಡುವ ನಾಗರಿಕರಾಗಬೇಕು ಎನ್ನುವುದೇ ಪ್ರತಿಯೊಬ್ಬ ಶಿಕ್ಷಕರ ಆಶಯ ಆಗಿರುತ್ತದೆ ಎಂದು ಬಾಸೆಲ್​ ಮಿಶನ್​ ಗಂಡು ಮಕ್ಕಳಪ್ರೌಢ ಶಾಲೆ ನಿವೃತ್ತ ಪ್ರಾಚಾಯೆರ್ ಶೋಬಾ ಅನಬನ್​ ಹೇಳಿದರು.
ನಗರದ ಬಾಸೆಲ್​ ಮಿಶನ್​ ಗಂಡು ಮಕ್ಕಳ ಪ್ರೌಢ ಶಾಲೆಯ 2000ನೇ ಇಸ್ವಿ ಬ್ಯಾಚ್​ನ ವಿದ್ಯಾಥಿರ್ಗಳು ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾವು ಕಲಿಸಿದ ಶಿಕ್ಷಣದಿಂದ ವಿದ್ಯಾಥಿರ್ಗಳು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಲಿ, ಪ್ರಬುದ್ಧರಾಗಿ ಬೆಳೆಯಲಿ ಎಂಬುದೇ ನಮ್ಮ ಉದ್ದೇಶ. ನಮ್ಮ ವಿದ್ಯಾಥಿರ್ಗಳು ಸಮಾಜದಲ್ಲಿ ಉನ್ನತ ಹಂತ ತಲುಪಿದರೆ ಅದರಷ್ಟು ಸಂತೋಷದ ಸಂಗತಿ ಯಾವುದಿಲ್ಲ ಎಂದರು.
ಪ್ರಾಧ್ಯಾಪಕ ಆರ್​.ಎಚ್​. ಉಳ್ಳಾಗಡ್ಡಿ ಮಾತನಾಡಿ, ಬುದ್ದಿ ಎಂಬ ಬೀಜವನ್ನು ಬಿತ್ತಿ ಇದೀಗ ಫಲ ನೋಡುತ್ತಿದ್ದೇವೆ. ವಿದ್ಯಾಥಿರ್ಗಳು ಗುರುವಂದನೆ ಅಂತಹ ಕಾರ್ಯಕ್ರಮ ಮಾಡುವ ಮೂಲಕ ತಮ್ಮ ಶಾಲೆ ಋಣ ತೀರಿಸುತ್ತಿರುವ ಒಳ್ಳೆ ಕಾರ್ಯ ಖುಷಿ ತಂದಿದೆ. ಪ್ರತಿಯೊಬ್ಬರು ಆಸೆ, ಅಹಂಕಾರ ತೊರೆಯಬೇಕು. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂಬ ಮನೋಭಾವ ತೊರೆದರೆ ಜೀವನದಲ್ಲಿ ಉತ್ತುಂಗಕ್ಕೆ ಬೆಳೆಯಬಹುದು ಎಂದರು.
ಶಿಕ್ಷಕರಾದ ಸಿ.ಎ. ಬಲ್ಮಿ, ಮಳೇಕಾರ, ಎಂ.ಪಿ. ಮಲ್ಹಾರ, ಎಂ.ಡಿ. ಮುತ್ತಲಗೇರಿ, ಎ.ಜಿ. ಕೋರಿ, ವಿ.ಎಸ್​. ಹಿರೇಮಠ, ಡಿ.ಎನ್​. ಬೋಕಿ, ಸಿ.ಎ. ಸ್ಟೀಫನ್​?, ಎಲ್​.ಪಿ. ಶಿಂಧೆ, ಲಾರೆನ್ಸ್​, ರೀಟಾ ನಾಯ್ಕರ, ಬೀರಣ್ಣವರ ಸೇರಿ 15ಕ್ಕೂ ಹೆಚ್ಚು ನಿವೃತ್ತ ಹಾಗೂ ಹಾಲಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.
ನಂತರ ಬರೋಬರಿ 24 ವರ್ಷಗಳ ನಂತರ ಭೇಟಿಯಾದ ವಿದ್ಯಾಥಿರ್ಗಳು ಶಾಲೆ ತುಂಬೆಲ್ಲಾ ಓಡಾಡಿ ಹಳೇ ನೆನಪುಗಳನ್ನು ಮೆಲಕು ಹಾಕಿದರು. ತಮ್ಮ ಅಚ್ಚು ಮೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ತಾವು ಮಾಡಿದ ಗಲಾಟೆ, ಕೀಟಲೆಗಳನ್ನು ಅವರೆದುರು ಹೇಳಿ ವಿದ್ಯಾಥಿರ್ ಲೋಕಕ್ಕೆ ಹೋದರು. ಶಿಕ್ಷಕರು ಸಹ ವಿದ್ಯಾಥಿರ್ಗಳ ಬೆಳವಣಿಗೆ ಕಂಡು ಹಾರೈಸಿದರು.
ಮಲ್ಲಿಕಾರ್ಜುನ ತಮದಂಡಿ, ಆನಂದ ಪೂಜಾರ, ವಿನಾಯಕ ಪತಂಗೆ, ವೀರೇಶ ಗಡೆನ್ನವರ, ನಾಗೇಶ ಕುಸುಗಲ್​, ಸಂತೋಷ ಜಾಗೀರದಾರ ಸೇರಿ 50ಕ್ಕೂ ಹೆಚ್ಚು ಹಳೇ ವಿದ್ಯಾಥಿರ್ಗಳು ಭಾಗವಹಿಸಿದ್ದರು. ಬಸವರಾಜ ಹಿರೇಮಠ ಸ್ವಾಗತಿಸಿದರು. ಚಂದ್ರಶೇಖರ ಶಿವಯ್ಯನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕಣಿರ್ ನಿರೂಪಿಸಿದರು. ಶಶಿಧರ ಶಿರಯಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net