ಮಕ್ಕಳು ಹೆತ್ತವರ ಕನಸು ನನಸಾಗಿಸಲಿ

SANSHI INNOGRETION
Published on

ಸಂಶಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು.

ಗ್ರಾಮದಲ್ಲಿರುವ ಕೆಎಲ್​ಇ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಮಕ್ಕಳು ನಮ್ಮಂತೆ ಕೂಲಿ, ನಾಲಿ ಮಾಡದೇ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಹೆತ್ತವರ ಕನಸು ನನಸಾಗಿಸಬೇಕು ಎಂದರು.

ಜೆಎಸ್​ಎಸ್ ವಿದ್ಯಾಪೀಠದ ಕಾರ್ಯದರ್ಶಿ ಯಲ್ಲಪ್ಪ ಮೇಗುಂಡಿ ಮಾತನಾಡಿ, ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸ್ಥಾನಿಕ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು. ಜನ್ಮ ನೀಡಿದ ತಂದೆ-ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳ ಋಣವನ್ನು ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

ಆಡಳಿತ ಮಂಡಳಿ ಸದಸ್ಯರಾದ ಎಚ್.ಎನ್. ಪಾಟೀಲ, ಡಾ. ಬಿ.ಜಿ. ಪಾಟೀಲ, ಬಿ.ಬಿ. ಬೂದಿಹಾಳ, ಬಿ.ಎಂ. ಕಜ್ಜಿ, ಬಿ.ವೈ. ಸೈಬಣ್ಣವರ, ಪತ್ರಕರ್ತ ಅಶೋಕ ಘೊರ್ಪಡೆ, ರಜಾಕ್​ಸಾಬ್ ಅಂಕಲಿಗಿ, ಎಂ.ಆರ್. ಯಲ್ಲರೆಡ್ಡಿ, ಶಿವಾನಂದ ಹತ್ತಿ ಇತರರು ಉಪಸ್ಥಿತರಿದ್ದರು. ಕಾಲೇಜ್ ಪ್ರಾಚಾರ್ಯ ಪೊ›. ರಮೇಶ ಯ. ಅತ್ತಿಗೇರಿ, ಯಶೋದಾ ಆಲೂರ, ನಿಸರ್ಗ ಕೊರಡೂರ ಹಾಗೂ ಕುಮಾರ ಫಕೀರೇಶ ರವಡೂರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net