

ಮುಂಡರಗಿ: ಕಿತ್ತೂರು ಚನ್ನಮ್ಮ ಅವರನ್ನು ಮನೆ-ಮನಗಳಲ್ಲಿ ಮುಟ್ಟಿಸುತ್ತಿರುವ ಇಂತಹ ಕಾರ್ಯಕ್ರಮ ರಾಜ್ಯದಲ್ಲಿ ವಿಶೇಷವಾಗಿದೆ. ಪಂಚಮಸಾಲಿ ಸಮಾಜದ ಮಹಿಳೆಯರು ಸಂಘಟಕರಾಗಿ ಇಂತಹ ಕಾರ್ಯಕ್ರಮವನ್ನು ಮನೆ-ಮನೆಗಳಲ್ಲಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಎಪಿಎಂಸಿ ವರ್ತಕ ಅಂದಪ್ಪ ಗೋಡಿ ಹೇಳಿದರು.
ಪಟ್ಟಣದಲ್ಲಿ ಪಂಚಮಸಾಲಿ ಮಹಿಳಾ ಶಹರ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮನೆ-ಮನದಲ್ಲಿ ಚನ್ನಮ್ಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೋಣಿಯ ಲಿಂಗನಗೌಡ ಹರ್ತಿ ಅವರು ಮಹಿಳಾ ಆರ್ಥಿಕ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಹೊಟ್ಟಿನ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಂಚಮಸಾಲಿ ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ನೇತ್ರಾವತಿ ಬಾವಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ, ಶಹರ ಘಟಕದ ಅಧ್ಯಕ್ಷ ಆರ್.ವೈ. ಪಾಟೀಲ, ವೀರನಗೌಡ ಗುಡದಪ್ಪನವರ, ರಾಜೇಶ ಅರಕಲ್, ಎನ್.ಎಂ. ಕುಕನೂರ, ಪ್ರಮೋದ ಇನಾಮತಿ, ಎಂ.ಎಸ್. ಹೊಟ್ಟಿನ, ಮಂಜುನಾಥ ಮುಧೋಳ, ವಿಶ್ವನಾಥ ಉಳ್ಳಾಗಡ್ಡಿ, ಬಸವರಾಜ ಗೋಡಿ, ವೀರೇಶ ಗೋಡಿ, ಶೋಭಾ ಪಾಟೀಲ, ಲೀಲಾ ಉಮಚಗಿ, ಇತರರು ಉಪಸ್ಥಿತರಿದ್ದರು.
ಪೊ›.ಆರ್.ಎಲ್. ಪೊಲೀಸ್ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ಗೋಡಿ ಹಾಗೂ ನೇತ್ರಾವತಿ ಬಾವಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.