ಬಸವಣ್ಣನವರ ತತ್ವಗಳು ಎಲ್ಲರಿಗೂ ತಲುಪಲಿ

h17-Basava Kendra bellad
Published on

ಹುಬ್ಬಳ್ಳಿ: ಬಸವಣ್ಣನವರ ತತ್ವಗಳು ಎಲ್ಲರಿಗೂ ತಲುಪಬೇಕು. ಬಸವಾದಿ ಶರಣರು ಸರ್ವಜನಾಂಗದ ಏಳ್ಗೆಗಾಗಿ ದುಡಿದವರು. ಬಸವಣ್ಣನವರನ್ನು ಲಿಂಗಾಯತರಿಗೆ ಸೀಮಿತಗೊಳಿಸಬಾರದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಚನ ಶ್ರಾವಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಕಲ ಜೀವಿಗಳಿಗೂ ಲೇಸನ್ನು ಬಯಸಿದವರು ಬಸವಣ್ಣನವರು. ಬಸವ ತತ್ವ ನಿಷ್ಠೆ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಿದವರು ಇಳಕಲ್ ಮಠದ ಪೂಜ್ಯ ಶ್ರೀ ಮಹಾಂತಸ್ವಾಮೀಜಿಯವರು ಎಂದರು.

ಇಳಕಲ್ ಶ್ರೀ ಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಮತ್ಸರ, ಹೊಟ್ಟೆಕಿಚ್ಚು ಮಾಯವಾಗುತ್ತವೆ ಎಂದರು.

ಪ್ರೊ. ಸಿದ್ದಣ್ಣ ಲಂಗೋಟಿ, ಶಿರೂರ ಮಹಾಂತತೀರ್ಥದ ಶ್ರೀ ಡಾ. ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಎಂ.ವಿ. ಗೊಂಗಡಶೆಟ್ಟಿ, ಡಾ. ಎಸ್.ಪಿ. ಬಳಿಗಾರ, ಪ್ರಭು ಅಂಗಡಿ, ಬಸವ ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಡಾ.ಸುರೇಶ ಹೊರಕೇರಿ, ಬಿ.ಎಲ್. ಲಿಂಗಶೆಟ್ಟರ್, ದಾಕ್ಷಾಯಣಿ ಕೋಳಿವಾಡ, ಎಂ.ಬಿ. ಕಟ್ಟಿಯವರ, ಡಾ. ಪ್ರಕಾಶ ಮುನ್ನೋಳಿ, ಡಾ. ಕಲ್ಯಾಣಮ್ಮ ಲಂಗೋಟಿ, ಪ್ರೊ.ಎಸ್.ವಿ. ಪಟ್ಟಣಶೆಟ್ಟಿ, ಶಂಕರ ಕೋಳಿವಾಡ, ಆರ್.ಸಿ. ಹಲಗತ್ತಿ, ಜಯಪ್ರಕಾಶ ತೆಂಗಿನಕಾಯಿ, ನೀಲಕಂಠ ಅಸೂಟಿ, ಸದಾಶಿವ ಚೌಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net