ಬಾಬಾ ಸಾಹೇಬರ ಆದರ್ಶ ಪಾಲಿಸಲಿ

14Rayabag2
Published on

ರಾಯಬಾಗ: ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನ ಮತ್ತು ಮತದಾನ ಹಕ್ಕು ನೀಡಿರುವುದು ಬಾಬಾಸಾಹೇಬರು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

ಪಟ್ಟಣದ ಅಂಬೇಡ್ಕರ್​ ವತ್ತದಲ್ಲಿ ತಾಲೂಕಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್​ ಆದರ್ಶ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು. ಶಾಸಕ ಮಹೇಂದ್ರ ತಮ್ಮಣ್ಣವರ ಮಾತನಾಡಿ, ಡಾ.ಬಿ.ಆರ್​.ಅಂಬೇಡ್ಕರ್​ ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲ ಎಂದು ಹೇಳಿದರು. ರಾಜ್ಯ ಮಹಿಳಾ ಆಯೋಗದ ಅಧ್ಯೆ ನಾಗಲಕ್ಷಿ$್ಮ ಚೌಧರಿ ಮಾತನಾಡಿ, ಅಂಬೇಡ್ಕರ್​ ಕನಸು ನನಸು ಆಗಬೇಕಾದರೆ ಪ್ರತಿಯೊಬ್ಬರೂ ಶಿಣ ಪಡೆಯಬೇಕು ಎಂದರು.

ಕಾಡೇಶ ಐಹೊಳೆ ಮತ್ತು ಮಹಾವೀರ ಸಾನೆ ಉಪನ್ಯಾಸ ನೀಡಿದರು. ತಹಸೀಲ್ದಾರ್​ ಎಸ್​.ಆರ್​. ಮುಂಜೆ, ಸಿಪಿಐ ಬಿ.ಎಸ್​.ಮಂಟೂರ, ತಾಪಂ ಇಒ ಎಸ್​.ಕೆ. ಕದ್ದು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್​.ಚಂದರಗಿ, ಆಧಿಕಾರಿಗಳಾದ ಶಿವಕುಮಾರ ಡಿ., ವಿನೋದ ಮಾವರಕರ, ಬಸವರಾಜಪ್ಪ ಆರ್​., ಪರಮಾನಂದ ಮಂಗಸೂಳಿ, ಸುಭಾಷ ಭಜಂತ್ರಿ, ಎಸ್​.ವೈ.ಸನಮನಿ, ಎಂ.ಬಿ. ಪಾಟೀಲ, ಕಲ್ಪನಾ ಕಾಂಬಳೆ, ವಿಶ್ವನಾಥ ಹಾರೂಗೇರಿ, ಗಣೇಶ ಕಾಂಬಳೆ, ಕಿರಣ ಕಾಂಬಳೆ, ಪಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಅಪ್ಪಾಸಾಹೇಬ ಖೆಮಲಾಪುರೆ, ರವಿ ತಳವಾರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net