ಸಮರ್ಪಣೆಯ ಬದುಕು ನಮ್ಮದಾಗಲಿ

07 LXR 4
Published on

ಲಕ್ಷ್ಮೇಶ್ವರ: ತ್ಯಾಗ ಬಲಿದಾನ, ಸಮಾನತೆಯ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವನ್ನು ಶನಿವಾರ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಹೊಸ ಉಡುಗೆ ತೊಟ್ಟು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮೌಲಾನಾ ಹಾಪೀಜ್ ಶಕಿಲ್ ಧರ್ಮೋಪದೇಶ ನೀಡಿ, ಎಲ್ಲ ಧರ್ಮಗಳ ಸಾರ ಒಂದೇಯಾಗಿದೆ. ಬಡವರು, ಅಶಕ್ತರು, ವೃದ್ಧರಿಗೆ ಕೈಲಾದಷ್ಟು ಸಹಾಯ- ಸಹಕಾರ ಮಾಡುವ ಮೂಲಕ ಜಾತಿಬೇಧ ಮರೆತು ಎಲ್ಲ ಧರ್ಮೀಯರೊಂದಿಗೆ ಪರಸ್ಪರ ಪ್ರೀತಿ- ವಿಶ್ವಾಸ, ಸೌಹಾರ್ದ ಮತ್ತು ಸಮರ್ಪಣಾ ಮನೋಭಾವದ ಬದುಕು ನಮ್ಮದಾಗಬೇಕು. ಮನುಷ್ಯ ಜೀವನದಲ್ಲಿ ಪ್ರಾರ್ಥನೆ, ವ್ರತಾಚರಣೆಗಳು ವ್ಯಕ್ತಿಯನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತವೆ. ಈ ನಿಟ್ಟಿನಲ್ಲಿ ಜಗತ್ತಿನ ಶಾಂತಿ, ನೆಮ್ಮದಿಗಾಗಿ ಅಲ್ಲಾನ ಬಳಿ ಪ್ರಾರ್ಥಿಸಿಸೋಣ ಎಂದರು.

ಅಂಜುಮನ್, ಆಸಾರ ಕಮಿಟಿ ಪ್ರಮುಖರು ಸೇರಿ ಅಪಾರ ಸಂಖ್ಯೆಯ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮಂಜಲಾಪುರ, ಶಿಗ್ಲಿ, ಹುಲ್ಲೂರ, ಸೂರಣಗಿ, ಬಾಲೆಹೊಸೂರಲ್ಲೂ ಬಕ್ರೀದ್ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net