18-19 ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಹಲಸಿನ ಹಬ್ಬ

jack
Published on


ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ 7ನೇ ವರ್ಷದ ಹಲಸಿನ ಹಬ್ಬ ಮೇ 18 ಮತ್ತು 19ರಂದು ಬೆಳಗ್ಗೆ 9 ಗಂಟೆಯಿಂದ ಶರವು ದೇವಳದ ಬಳಿ ಇರುವ ಬಾಳಂಭಟ್ ಸಭಾಂಗಣದಲ್ಲಿ ನಡೆಯಲಿದೆ.


ಎರಡು ದಿನಗಳ ಈ ಹಬ್ಬವನ್ನು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕ ಚಂದ್ರಶೇಖರ ಶೆಟ್ಟಿ, ಕೃಷಿ ಸಾಧಕಿ ಕಿರಣ್ ರಾಜೇಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಹಲಸು ಬೆಳೆಗಾರರು, ಹಲಸು ಹಣ್ಣ ಮೌಲ್ಯವರ್ಧಿತ ಉತ್ಪನ್ನಗಳು, ತಿಂಡಿ ತನಿಸುಗಳ ಸುಮಾರು 40 ಮಳಿಗೆ ಇರಲಿವೆ. ಈ ಹಲಸಿನ ಜಾತ್ರೆ ಕೆಲವು ಸಾವಯವ ಉತ್ಪನ್ನಗಳನ್ನು ಲಭ್ಯಗೊಳಿಸಲಿದೆ.


ಉಚಿತ ವೈದ್ಯಕೀಯ ಶಿಬಿರ: ಗ್ರಾಹಕರ ಪ್ರಯೋಜನಕ್ಕಾಗಿ ಕಣಚೂರು ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ಉಚಿತವಾಗಿ ಮಧುಮೇಹ ಪರೀಕ್ಷೆ, ರಕ್ತದೊತ್ತಡ, ರಕ್ತದಲ್ಲಿನ ಹಿಮೋಗ್ಲೋಬಿನ್ ಮೌಲ್ಯಮಾಪನ, ಮೂಳೆ ಖನಿಜ ಸಾಂದ್ರತೆ ಪರೀಕ್ಷೆಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net