ಮಾವನೂರ ಬಳಿ ಅಪಘಾತ: ಇಬ್ಬರು ಯುವಕರ ದಾರುಣ ಸಾವು

UGD-Web
Published on

ಉಳ್ಳಾಗಡ್ಡಿ-ಖಾನಾಪುರ: ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ಸಮೀಪ ಬೀದಿ ದೀಪದ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಶುಕ್ರವಾರ ರಾತ್ರಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಟ್ಟಿದ್ದಾರೆ.

ಗೋಕಾಕ ತಾಲೂಕಿನ ಸಚಿನ ಬಾಳಪ್ಪ ಪಾಟೀಲ (27) ಹಾಗೂ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದ ಜೀವನ್‌ಕೃಷ್ಣ ಶಿವಣ್ಣ್ಣ (21) ಮೃತಪಟ್ಟವರು. ಯುವಕರು ಮಾವನೂರ ಗ್ರಾಮದಿಂದ ಪಾಶ್ಚಾಪುರ ಗ್ರಾಮಕ್ಕೆ ಬರುವಾಗ ಶುಕ್ರವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಪಘಾತ ಸಂಭಿಸಿದೆ ಎನ್ನಲಾಗಿದೆ.

ಸಿಪಿಐ ರಮೇಶ ಛಾಯಾಗೋಳ ಹಾಗೂ ಪಿಎಸ್‌ಐ ರಮೇಶ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net