ಮಾವಳ್ಳಿ ಗ್ರಾಮದೇವಿಯರ ಜಾತ್ರೆ

YLP GURUPADAYYA
Published on

ಯಲ್ಲಾಪುರ: ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಕನ್ನಡಗಲ್ ಮಾವಳ್ಳಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಫೆ. 19ರಿಂದ 27 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಗುರುಪಾದಯ್ಯ ನಂದೊಳ್ಳಿಮಠ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19ರಂದು ಸಂಜೆ 4 ಗಂಟೆಗೆ ಮೆರವಣಿಗೆ ಮೂಲಕ ಗ್ರಾಮದೇವಿಯರನ್ನು ಜಾತ್ರಾ ಗದ್ದುಗೆಗೆ ಕರೆದೊಯ್ಯಲಾಗುವುದು.

20ರಿಂದ 27 ರ ಮಧ್ಯಾಹ್ನ 3.30 ರವರೆಗೆ ಭಕ್ತರಿಗೆ ಹಣ್ಣುಕಾಯಿ, ಉಡಿ ಸೇವೆಗೆ ಅವಕಾಶವಿದೆ. 27ರ ಸಂಜೆ ಗ್ರಾಮದೇವಿಯರು ಮೆರವಣಿಗೆ ಮೂಲಕ ಊರ ಗಡಿಯ ಗದ್ದುಗೆಗೆ ತೆರಳುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಮಾ. 13 ಹಾಗೂ 14 ರಂದು ಮರುಪ್ರತಿಷ್ಠೆ ನೆರವೇರಲಿದೆ ಎಂದು ವಿವರಿಸಿದರು.

ಫೆ. 26ರಂದು ಶಿವರಾತ್ರಿ ಪ್ರಯುಕ್ತ ದೇವಸ್ಥಾನದ ಆವಾರದಲ್ಲಿರುವ ಮೃತ್ಯುಂಜಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಜಾತ್ರೆಯಲ್ಲಿ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.

ಸಮಿತಿಯ ಪ್ರಮುಖರಾದ ರವಿ ಕೈಟ್ಕರ್, ಶ್ಯಾಮ ಆಚಾರಿ, ಗಿರೀಶ ಪಾಟೀಲ, ಸಿದ್ಧಾರ್ಥ ನಂದೊಳ್ಳಿಮಠ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net