ಲೆಕ್ಕಿಹಾಳ ಶ್ರೀ ಮೌನೇಶ್ವರ ಜಾತ್ರೆ ಸಂಪನ್ನ

MUDAGALMOUNESWARA TERU
ಮುದಗಲ್ ಸಮೀಪದ ಲೆಕ್ಕಿಹಾಳದಲ್ಲಿ ಶ್ರೀ ಮೌನೇಶ್ವರ ಪಲ್ಲಕ್ಕಿ ಉಚ್ಛಾಯ ಸಂಭ್ರಮದಿಂದ ಗುರುವಾರ ಜರುಗಿತು. ನಂದವಾಡಗಿಯ ಶ್ರೀ ಚನ್ನಬಸವ ಸ್ವಾಮಿ, ಸಂತೆಕೆಲೂರಿನ ಶ್ರೀ ಗುರುಬಸವ ಸ್ವಾಮೀಜಿ ಮತ್ತಿತರರಿದ್ದರು.
Published on

ಮುದಗಲ್: ಸಮೀಪದ ಲೆಕ್ಕಿಹಾಳ ಗ್ರಾಮದ ಆರಾಧ್ಯ ದೈವ ಶ್ರೀ ಮೌನೇಶ್ವರ ಜಾತ್ರೋತ್ಸವ ಪಲ್ಲಕ್ಕಿ ಉಚ್ಛಾಯದೊಂದಿಗೆ ಗುರುವಾರ ಸಂಪನ್ನಗೊಂಡಿತು.

ದೇವಸ್ಥಾನದಕ್ಕೆ ಕಳಸರೋಹಣ ನಂತರ ಶ್ರೀಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ನೂರಾರು ಭಕ್ತರು ದೀಡನಮಸ್ಕಾರ, ಕಾಯಿ, ಮುಡಿಪು ಮತ್ತಿತರ ಹರಕೆ ತೀರಿಸಿದರು. ಜಾತ್ರೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿ ಇಟ್ಟವು.

ನಂದವಾಡಗಿಯ ಶ್ರೀಚನ್ನಬಸವ ಸ್ವಾಮಿ, ಸಂತೆಕೆಲೂರಿನ ಶ್ರೀ ಗುರುಬಸವ ಸ್ವಾಮೀಜಿ, ಸಜ್ಜಲಗುಡ್ಡದ ಶ್ರೀ ದೊಡ್ಡಬಸವಾರ್ಯ ಸ್ವಾಮಿ, ಕೊಮನೂರಿನ ನಾಗಭೂಷಣ ಹಿರೇಮಠ, ಶರಣಯ್ಯ ಹಿರೇಮಠ, ಶಶಿಧರ ಹಾಗೂ ಲೆಕ್ಕಿಹಾಳ, ಬೊಮ್ಮನಾಳ, ಕೊಮನೂರು, ಉಪ್ಪಾರನಂದಿಹಾಳ, ಕಿಲಾರಹಟ್ಟಿ, ಕನಸಾವಿ, ಆಮದಿಹಾಳ, ಸಜ್ಜಲಗುಡ್ಡ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net