31 ರಂದು ಮೌನೇಶ್ವರ ಜಾತ್ರೆ ಜೋಡು ಪಲ್ಲಕ್ಕಿ ಉತ್ಸವ

29-msk-1
Published on

ಮಸ್ಕಿ: ಬಳಗಾನೂರಿನಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವ, ಜೋಡುಪಲ್ಲಕ್ಕಿ ಉತ್ಸವ, ಅಜಾತನಾಗಲಿಂಗ ಮಹಾಸ್ವಾಮಿಗಳ ಪುರಾಣ ಮಹಾಮಂಗಲ ಕಾರ್ಯಕ್ರಮ ಆ.31ರಂದು ನಡೆಯಲಿವೆ. ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ವಿಶ್ವಕರ್ಮ ಜಗದ್ಗುರು ಶ್ರೀ ಅಜ್ಜೇಂದ್ರ ಸ್ವಾಮಿಗಳು ಹಾಗೂ ದೇವದುರ್ಗ ಮಠದ ಮೌನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಆ.30 ರಂದು ಪಟ್ಟಣದಲ್ಲಿ ಅಹೋರಾತ್ರಿ ಪುರುವಂತರ ಸೇವೆ ನಡೆಯಲಿದೆ. ಬೇವಿನಾಳ ನಾಗಲಿಂಗ ಆಚಾರ್ಯರ ಪೌರೋಹಿತ್ಯದಲ್ಲಿ ಹೋಮ, ಅಭಿಷೇಕ, ಉಪನಯನ ನಡೆಯಲಿವೆ. ರಾತ್ರಿ ಸುತ್ತಲಿನ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ಇರಲಿದೆ.

ಆ.31 ರಂದು ಬ್ರಹ್ಮೀ ಮಹೂರ್ತದಲ್ಲಿ ಜೋಡು ಪಲ್ಲಕ್ಕಿ ಉತ್ಸವ, ಪುರವಂತಿಗೆ ಸೇವೆ ಶ್ರೀ ಮೌನೇಶ್ವರ ದೇವಸ್ಥಾನದಿಂದ ಆರಂಭವಾಗಲಿದೆ. ಜೊಡು ಪಲ್ಲಕ್ಕಿ ಉತ್ಸವ ಪಟ್ಟಣದ ವಿವಿಧ ದೇವಸ್ಥಾನಕ್ಕೆ ಬೇಟಿ ನೀಡುತ್ತಾ ಗಂಗಾಸ್ಥಳಕ್ಕೆ ತೆರಳಲಿದೆ. ಗಂಗಾಸ್ಥಳದಲ್ಲಿ ಮೌನೇಶ್ವರಗೆ ವಿಶೇಷ ಪೂಜೆ ಅಭಿಷೇಕ ನಡೆಯಲಿವೆ. ನಂತರ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಭಕ್ತರು ಒಂದೇ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಲಿದ್ದಾರೆ. ಸಂಜೆ ಗಂಗಾಸ್ಥಳದಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮೌನೇಶ್ವರ ಗುಹಾ ಪ್ರವೇಶ, ಸುಮಂಗಲೆಯರಿಗೆ ಫಲ-ಪುಷ್ಪಾದಿಗಳ ಸಮರ್ಪಣೆ ಸೇರಿ ಇತರ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net