

ಉಳ್ಳಾಲ: ಜೀವಿತಾವಧಿಯಲ್ಲಿ ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಹೆಸರನ್ನು ಸದಾ ಜೀವಂತವಾಗಿಡುತ್ತವೆ. ಯಾರೊಂದಿಗೂ ದ್ವೇಷ, ಅಸೂಯೆ ಹೊಂದದೆ ಸರ್ವರೊಂದಿಗೆ ಪರಸ್ಪರ ಪ್ರೀತಿಯಿಂದ ಜೀವಿಸಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ ಹೇಳಿದರು.
ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಉಳ್ಳಾಲ ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧೀನದಲ್ಲಿರುವ ಹಳೆಕೋಟೆ ಹಝ್ರತ್ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಮಾತನಾಡಿದರು.
ಹಳೆಕೋಟೆ ಮಸ್ಜಿದುಲ್ ಕರೀಂ ಖತೀಬ್ ಸಿರಾಜುದ್ದೀನ್ ಸಖಾಫಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಸಂಚಾಲಕ ಇಸ್ಮಾಯಿಲ್ ಹಾಜಬ್ಬ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ದಾಖಲಾತಿ ಆಂದೋಲನ ಉದ್ಘಾಟಿಸಿದರು. ಮಸ್ಜಿದುಲ್ ಕರೀಂ ಅಧ್ಯಕ್ಷ ಝೈನುದ್ದೀನ್, ಮಾಜಿ ಅಧ್ಯಕ್ಷ ಮೊಹಮ್ಮದ್ ತ್ವಾಹ, ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ನಿಕಟಪೂರ್ವ ಅಧ್ಯಕ್ಷ ಯು.ಎಚ್.ಫಾರೂಕ್, ಕ್ಷೇತ್ರ ಸಮನ್ವಯಾಧಿಕಾರಿ ಸುಶ್ಮಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್, ಶಿಕ್ಷಣ ಸಂಯೋಜಕಿ ಅನ್ನಪೂರ್ಣೇಶ್ವರಿ, ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಸದಸ್ಯ ಇಬ್ರಾಹಿಂ ಖಲೀಲ್, ನಗರಸಭಾ ಸದಸ್ಯೆ ಝರೀನಾ ರವೂಫ್, ಶಾಲಾಭಿವೃದ್ಧಿ ಸಮಿತಿ ಕೋಶಾಧಿಕಾರಿ ಕರೀಂ ಯು.ಎಚ್., ಸದಸ್ಯರಾದ ಎಂ.ಎಚ್.ಇಬ್ರಾಹಿಂ, ಅಲ್ತಾಫ್ ಯು.ಎಚ್. ಮೊದಲಾದವರು ಉಪಸ್ಥಿತರಿದ್ದರು.