ಪಠ್ಯೇತರ ಚಟುವಟಿಕೆಗಳಲ್ಲೂ ಪ್ರಬುದ್ಧತೆ ಅಗತ್ಯ

Mng_Bajpe
Published on

ಮಂಗಳೂರು: ವಿದ್ಯಾರ್ಥಿಗಳು ಶಾಲಾ ಶಿಕ್ಷಣದ ಜತೆಗೆೆ ಪಠ್ಯೇತರ ವಿಚಾರದಲ್ಲಿಯೂ ಪ್ರಬುದ್ಧರಾಗಿರಬೇಕು. ಕೃಷಿಯ ಪ್ರಾಯೋಗಿಕ ಚಟುವಟಿಕೆಯಿಂದ ವಿದ್ಯಾರ್ಥಿಗಳ ಜ್ಞಾನಶಕ್ತಿ ವೃದ್ಧಿಯಾಗಲಿದೆ ಎಂದು ಬಜಪೆ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಮುಖ್ಯಶಿಕ್ಷಕಿ ಭಗಿನಿ ಜೆಸ್ಸಿ ಪ್ರೀಮಾ ಹೇಳಿದರು.

ಬಜಪೆ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ಸುರಕ್ಷಾ ಪರಿಸರ ಹಾಗೂ ವಿಜ್ಞಾನ ಸಂಘದ ಸುಮಾರು 50 ವಿದ್ಯಾರ್ಥಿಗಳು ಬಜಪೆ ಸ್ವಾಮಿಲಪದವು ಬಳಿಯ ಕೃಷ್ಣಗೌಡರ ಗದ್ದೆಯಲ್ಲಿ ವಿದ್ಯಾರ್ಥಿಗಳ ನೇಜಿ ನಾಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಭತ್ತದ ನಾಟಿಯ ಕೃಷಿಯ ವಿವಿಧ ಹಂತದ ಪ್ರಕ್ರಿಯೆಗಳಾದ ಮಣ್ಣನ್ನು ಹದಗೊಳಿಸುವುದು , ಬಿತ್ತನೆ ಮಾಡಿದ ಗಿಡವನ್ನು ತೆಗೆಯುವ ಕ್ರಮ, ಗೊಬ್ಬರ ನೀಡುವುದು, ಬತ್ತ್ತದ ಗಿಡದ ಮಧ್ಯೆ ಬೆಳೆದ ಕಳೆ ಗಿಡಗಳನ್ನು ತೆಗೆಯುವ ಕ್ರಮ ಹಾಗೂ ಭತ್ತದ ಕೊಯ್ಲಿನ ವಿಚಾರದ ಬಗ್ಗೆ ಕೃಷ್ಣಗೌಡ ಅವರು ಮಕ್ಕಳಿಗೆ ವಿವರಿಸಿದರು.

ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳು ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಪ್ರಯುಕ್ತ ಓಟ ಹಾಗೂ ನಿಧಿ ಶೋಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಪರಿಸರ ವಿಜ್ಞಾನ ಸಂಘದ ಸಂಚಾಲಕ ಶಿಕ್ಷಕ ವಾಸುದೇವರಾವ್ ಕುಡುಪು , ಶಿಕ್ಷಕಿ ಲಿಲ್ಲಿ ಮಿನೇಜಸ್, ಧನ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net