ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮ ಸತ್ರ

mattu
Published on

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸುಗಮವಾಗಿ ನೇರವೇರಲಿ ಎಂಬ ಸಂಕಲ್ಪದೊಂದಿಗೆ ರಾಮನವಮಿ ಸಂದರ್ಭ ಏ.13 ರಿಂದ 22ರ ತನಕ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀರಾಮ ಸತ್ರ ಆಚರಿಸಲು ನಿರ್ಧರಿಸಲಾಗಿದೆ.

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ದಶ ದಿನಗಳ ಪರ್ಯಂತ ದೇವಳದಲ್ಲಿ ಪಟ್ಟದ ದೇವರಾದ ಹನುಮತ್ಸೇವಿತ ಸೀತಾ ಲಕ್ಷ್ಮಣ ಸಹಿತ ರಾಮಚಂದ್ರ ದೇವರ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಮತಾರಕ ಜಪ, ಹೋಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮನವಿ ಪತ್ರ ಬಿಡುಗಡೆ: ಕಾರ್ಯಕ್ರಮದ ಪೂರ್ವಭಾವಿಯಾಗಿ ಮಂಗಳವಾರ ಮನವಿ ಪತ್ರವನ್ನು ಪರ್ಯಾಯ ಅದಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.

ದೇವಳದ ಪ್ರಧಾನ ತಂತ್ರಿ ಮತ್ತು ಶ್ರೀರಾಮ ಸತ್ರ ಸಮಿತಿಯ ಅಧ್ಯಕ್ಷ ಮಟ್ಟು ಪ್ರವೀಣ್ ತಂತ್ರಿ, ಮಟ್ಟು ದೇವಳದ ಧರ್ಮದರ್ಶಿ ಹಾಗೂ ರಾಮ ಸತ್ರ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್ ಮಟ್ಟು, ಡಾ. ಅನಂತ ಹೆಬ್ಬಾರ್, ಕೊಡವೂರು ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ್ ಕೊಡವೂರು, ರಾಘವೇಂದ್ರ ರಾವ್, ಶ್ರೀಕಾಂತ ಆಚಾರ್ಯ, ಪ್ರವೀಣ್ ಶೇರಿಗಾರ್, ಹರ್ಷಿತ್ ಮಟ್ಟು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net