

ಮಂಗಳೂರು : ದೇಶದ ಸ್ವಾತಂತ್ರೃಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರನ್ನು ಸದಾ ಸ್ಮರಿಸುವುದರ ಜತೆಗೆ ದೇಶದ ಹಿತಕ್ಕಾಗಿ
ಕಿಂಚಿತ್ ಕೊಡುಗೆ ನೀಡುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಸ್ವಾತಂತ್ರೃ ಹೋರಾಟಗಾರ ಮಟ್ಟಾರು ವಿಠಲ ಕಿಣಿ
ಹೇಳಿದರು.
ನಗರದ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸ್ವಾತಂತ್ರೃ ದಿನದ ಪೂರ್ವಭಾವಿಯಾಗಿ ಗುರುವಾರ ತ್ರಿವರ್ಣ ಧ್ವಜ , ಸ್ಟೀಲ್ ಬಟ್ಟಲು, ಸಿಹಿ ತಿಂಡಿ ಉಡುಗೊರೆ ನೀಡಿ ಅವರು ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ
ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ. ಎನ್., ಕಾಪಿಕಾಡ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಲೀನಾ ಡಿಸೋಜ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಿಂಧು,
ಅಂಗನವಾಡಿ ಶಿಕ್ಷಕಿ ನಂದಾ,ಸಹಾಯಕಿ ಲಕ್ಷ್ಮಿಉಪಸ್ಥಿತರಿದ್ದರು.