ಗೋಳಿಯಡ್ಕದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯ

Kdb_Kabaddi
Published on

ಕಡಬ: ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಕುಸಲ್ದ ಜವನೆರೆ ತುಳುಕೂಟೊ ವತಿಯಿಂದ ದೀಪಾವಳಿ ಪ್ರಯುಕ್ತ ಪರ್ಬೊದ ಕಜ್ಜೊ ಹಾಗೂ ಮ್ಯಾಟ್ ಕಬಡ್ಡಿ ಪಂದ್ಯಾಟ ರೆಂಜಿಲಾಡಿ ಗ್ರಾಮದ ಗೋಳಿಯಡ್ಕದಲ್ಲಿ ನಡೆಯಿತು.

ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ ಉದ್ಘಾಟಿಸಿದರು. ರವೀಂದ್ರ ಗುರುಸ್ವಾಮಿ, ಗೋಳಿಯಡ್ಕ ಪುಂಡಿಕ್ ಮಾಡ ರಾಜನ್ ದೈವಸ್ಥಾನ ಅಧ್ಯಕ್ಷ ಲಿಂಗಪ್ಪ ಗೌಡ ಖಂಡಿಗ, ಕುಸಲ್ದ ಜವನೆರೆ ತುಳುಕೂಟೊ ಅಧ್ಯಕ್ಷ ಗಂಗಾಧರ ಗೌಡ ಗರ್ಗಸ್‌ಪಾಲ್, ಕಾರ್ಯದರ್ಶಿ ಜಯರಾಮ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಸಲ್ದ ಜವನೆರೆ ತುಳುಕೂಟೊ ಅಧ್ಯಕ್ಷ ಗಂಗಾಧರ ಗೌಡ ಗರ್ಗಸ್‌ಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಕಚೇರಿ ಉಪತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ, ಪ್ರಮುಖರಾದ ತೋಮಸ್ ಎಂ. ಪೇರಡ್ಕ ಮತ್ತಿತರರು ಉಪಸ್ಥಿತರಿದ್ದರು. ಸಾಧಕರನ್ನು ಸಮ್ಮಾನಿಸಲಾಯಿತು.

ಅಖಿಲ್ ಸ್ವಾಗತಿಸಿದರು. ಕವೀಶ್ ಗೋಳಿಯಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ದಿವಾಕರ ಉಪ್ಪಳ ಕಬಡ್ಡಿ ಪಂದ್ಯಾಟ ನಿರೂಪಿಸಿದರು. ಕಬಡ್ಡಿ ಪಂದ್ಯಾಟದಲ್ಲಿ ಜನನಿ ಕಡಬ ಪ್ರಥಮ ಹಾಗೂ ಸೈಫ್ ಅಕಾಡೆಮಿ ಉಡುಪಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net