

ಹುಬ್ಬಳ್ಳಿ: ಇಲ್ಲಿಯ ಸೇವಾಭಾರತಿ ಟ್ರಸ್ಟ್ ಮಾತೃಛಾಯ ಬಾಲಕಲ್ಯಾಣ ಕೇಂದ್ರದಲ್ಲಿ ಶನಿವಾರ ಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೃಷ್ಣನಿಗೆ ವಿಶೇಷವಾಗಿ 365 ಬಗೆಯ ಸಿಹಿ ಹಾಗೂ ಖಾರದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡಲಾಯಿತು.
ಅತಿಥಿಗಳಾಗಿದ್ದ ಡಾ. ಸಹನಾ ಅವರು ಮಾತನಾಡಿ, ಶ್ರೀ ಕೃಷ್ಣನು ಧರ್ಮ ರಕ್ಷಕ. ಆತನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಿಳೆಯರು ಹಾಗೂ ಮಕ್ಕಳಿಂದ ಶೋಭಾಯಾತ್ರೆ ನಡೆಯಿತು. ಕೃಷ್ಣಪರಮಾತ್ಮನ ತೊಟ್ಟಿಲೋತ್ಸವ ನೆರವೇರಿತು. ಬಡಾವಣೆಯ ಮಕ್ಕಳು ಕೃಷ್ಣವೇಷ ಧರಿಸಿ ಸಂಭ್ರಮಿಸಿದರು. ಬಾಲಕಲ್ಯಾಣ ಕೇಂದ್ರದ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು.
ವಿದ್ಯಾ ವಿಕಾಸ ಕೇಂದ್ರದ ಅಧ್ಯೆ ಭಾರತಿ ನಂದಕುಮಾರ ಉಪಸ್ಥಿತರಿದ್ದರು.
ಬಾಲಕಲ್ಯಾಣ ಕೇಂದ್ರದ ಅಧ್ಯೆ ಕಮಲಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಮ್ರತಾ ಜೋಶಿ ಪ್ರಾರ್ಥನೆ ಹಾಡಿದರು. ನಂದಾ ಸವಡಿ ಸ್ವಾಗತಿಸಿದರು. ಆಶಾ ಚೌದರಿ ಕಾರ್ಯಕ್ರಮ ನಿರೂಪಿಸಿದರು. ರತ್ನಾ ಮಾತಾಜಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಂಜುಳಾ ಕೃಷ್ಣನ್ ವಂದಿಸಿದರು.