ಶಿರೋಳದಲ್ಲಿ ಮಾತೃ ಭೋಜನ, ತಾಯಂದಿರ ಪಾದಪೂಜೆ

Published on

ಶಿರೋಳ: ಮಗುವಿನ ಲಾಲನೆ ಪಾಲನೆಯಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಇಂದಿನ ಕಾಲದಲ್ಲಿ ವೃದ್ಧಾಶ್ರಮದ ಸಂಖ್ಯೆ ಹೆಚ್ಚುತ್ತಿರುವುದು ವಿಷಾದನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಗುರುನಾಥ ಹೂಗಾರ ಹೇಳಿದರು.

ಗ್ರಾಮದ ಬಿ.ಎಂ. ಪಾಟೀಲ ಪ್ರೌಢಶಾಲೆಯಲ್ಲಿ ಗುರುವಾರ ಮಾತೃ ಭೋಜನ ಹಾಗೂ ತಾಯಂದಿರ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾಂತ್ರಿಕ ಜೀವನದಲ್ಲಿ ಮನುಷ್ಯನಲ್ಲಿ ಮನವಿಯ ಮೌಲ್ಯಗಳು ಕಡಿಮೆಯಾಗುತ್ತಿವೆ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

ಉಪನ್ಯಾಸಕ ಶ್ರೀ ಪ್ರಭಾಕರ್ ಉಳ್ಳಾಗಡ್ಡಿ, ಪ್ರಶಾಂತ ಪಲ್ಲೇದ, ಪ್ರಕಾಶ ಮಾತನಾಡಿದರು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ತಾಯಂದಿರು ಭಾಗವಹಿಸಿ ಮಕ್ಕಳಿಂದ ಪಾದಪೂಜೆ ಸ್ವೀಕರಿಸಿದರು. ನಂತರ ತಾಯಂದಿರು ಮಕ್ಕಳಿಗೆ ಕೈ ತುತ್ತು ಉಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶೇಖರಯ್ಯ ನಾಗಲೋಟಿಮಠ ವಹಿಸಿದ್ದರು, ರಾಹುಲ ಕೋಟೆ, ವಿನೋದ ದೇಸಾಯಿ, ವಿಜಯ ಪಟೇಲ, ಸಂಸ್ಥೆಯ ಸದಸ್ಯರಾದ ಪ್ರಕಾಶಗೌಡ್ರ ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಲೋಕಪ್ಪ ಕರ್ಕಿಕಟ್ಟಿ, ವಿ.ಕೆ. ಮರಿಗುದ್ದಿ, ಎಸ್.ಜಿ. ರಾಜನಾಳ, ಬಿ.ಎಫ್.ಮಜ್ಜಗಿ, ಜಿ.ಎನ್. ದೊಡ್ಡ ಲಿಂಗಪ್ಪನವರ ಇದ್ದರು. ಬಾಪುಗೌಡ ತಿಮ್ಮನ ಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಚ್. ಕೆಳಗಡೆ ಸ್ವಾಗತಿಸಿ, ಎಸ್.ಎಸ್. ಹಿರೇಮಠ ನಿರೂಪಿಸಿ, ವಿ.ಎಸ್. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net