ಮೆಟ್ರಿ ವ್ಯಾಪ್ತಿಯಲ್ಲಿ 1320 ಕುಟುಂಬಗಳಿಗೆ ತಲಾ 4 ಕೆಜಿ ಬಿಳಿ ಜೋಳ ಹಂಚಿದ ರೈತ

210420 Kampli Free Jawara Issue
Published on

ಕಂಪ್ಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೆಟ್ರಿ ಗ್ರಾಮದ ರೈತ ಊಳೂರು ಬಸವನಗೌಡ (ರಾಜಪ್ಪ) ಮೆಟ್ರಿ ಗ್ರಾಪಂ ವ್ಯಾಪ್ತಿಯ 1320 ಕುಟುಂಬಗಳಿಗೆ ತಲಾ 4 ಕೆಜಿಯಂತೆ 50 ಕ್ವಿಂಟಾಲ್ ಬಿಳಿ ಜೋಳ ಭಾನುವಾರ ಉಚಿತವಾಗಿ ವಿತರಿಸಿದರು. ಎಮ್ಮಿಗನೂರು ಗ್ರಾಮದ ರೈತ ಪಿಂಜಾರು ಬಾಲಪ್ಪರಿಂದ 1,12,500 ರೂ. ಮೌಲ್ಯದ 50 ಕ್ವಿಂಟಾಲ್ ಜೋಳ ಖರೀದಿಸಿ ಮೆಟ್ರಿ ಗ್ರಾಮದ 1200 ಮತ್ತು ಚಿನ್ನಾಪುರ ಗ್ರಾಮದ 120 ಕುಟುಂಬಗಳಿಗೆ ಬಿಳಿ ಜೋಳ ಉಚಿತವಾಗಿ ವಿತರಿಸಿದ್ದಾಗಿ ಊಳೂರು ಬಸವನಗೌಡ ತಿಳಿಸಿದರು.ಪ್ರಮುಖರಾದ ಊಳೂರು ನಾಗರೆಡ್ಡಿ, ರಡ್ಡೇರು ಬಸವರಾಜ, ಮರೇಗೌಡ ಗಿರೆಡ್ಡಿ, ಯರಿಸ್ವಾಮಿ ಶಾಲಿಗನೂರು, ಎಂ.ಸಿದ್ದಲಿಂಗಸ್ವಾಮಿ, ಎಚ್. ಕುಮಾರಸ್ವಾಮಿ, ಎಚ್. ಜಗದೀಶ್, ಹೊಳ್ಯಾಚಿ ಮಲ್ಲಿಕಾರ್ಜುನ, ಕುರುಬರ ರೇವಣಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net