ಮಾತೃ ಸಮಾನ ನರ್ಸ್​ಗಳ ಸೇವೆ ಅನನ್ಯ

Matr Samana nurses service is unique
ವಿಜಯಪುರದ ಎಕ್ಸಲಂಟ್​ ಕಾಲೇಜ್​ ಆಫ್​ ನರ್ಸಿಂಗ್​ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಶುಶ್ರೂಷ ದಿನ ಆಚರಿಸಲಾಯಿತು. ಸಂಗಮೇಶ ಬಬಲೇಶ್ವರ, ಅಖಿಲಾ ಬಿರಾದಾರ, ಅಂಜುಮ್​ ಹತ್ತಿರಕಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ವಿಶ್ವದ ಶ್ರೇಷ್ಠ ನರ್ಸ್​ ಆಗಿ ಸೇವೆ ಸಲ್ಲಿಸಿದ ಫ್ಲಾರೆನ್ಸ್​ ನೈಂಟಿಗೇಲ್​ ಜನ್ಮದಿನವನ್ನು ಅಂತರ ರಾಷ್ಟ್ರೀಯ ಶುಶ್ರೂಷ ದಿನವಾಗಿ ಆಚರಿಸಲಾಗುತ್ತದೆ.

ಫ್ಲಾರೆನ್ಸ್​ ನೈಂಟಿಗೇಲ್​ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಈ ವೃತ್ತಿ ಆಯ್ಕೆ ಮಾಡಿಕೊಂಡರು. ಅವರ ತ್ಯಾಗ ಸೇವೆ ಜಗತ್ತಿನಾದ್ಯಂತ ಇಂದಿಗೂ ಸ್ಮರಣೀಯ. ಮಾತೃ ಸಮಾನರಾದ ನರ್ಸ್​ಗಳ ಸೇವೆ ನಿಜಕ್ಕೂ ಅನನ್ಯ ಎಂದು ಆಕ್ಸಫರ್ಡ್​ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲಂಟ್​ ಕಾಲೇಜ್​ ಆಫ್​ ನರ್ಸಿಂಗ್​ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಅಂತರ ರಾಷ್ಟ್ರೀಯ ಶುಶ್ರೂಷ ದಿನಾಚರಣೆ ಮುಖ್ಯ ಅತಿಥಿಯಾಗಿ ಆಗಮಸಿ ಅವರು ಮಾತನಾಡಿ, ನರ್ಸಿಂಗ್​ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಫ್ಲಾರೆನ್ಸ್​ ನೈಂಟಿಗೇಲ್​ ಬದುಕು ಒಂದು ಪ್ರೇರಣೆಯಾಗಲಿ ಎಂದು ಅವರು ಹೇಳಿದರು.

ಅಖಿಲಾ ಬಿರಾದಾರ, ಅಂಜುಮ್​ ಹತ್ತಿರಕಿಹಾಳ, ಆಕಾಶ ಮಲನೂರ, ರಾಜು ತಿಡುಗುಂದಿ, ಅಶ್ವಿನಿ ಸಾಲ್ಗಾರ, ಸಮತಾ ಸಿಂಗಾಡಿ, ಪಂಕಜ ಪವಾರ, ಮಲ್ಲಿಕಾರ್ಜುನ ಎಸ್​.ಕೆ., ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net