

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಅರವಿಂದ ನಗರದಲ್ಲಿರುವ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಧರ್ಮದಶಿರ್ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಸಲ್ಲಿಸುತ್ತಿರುವ ಧಾಮಿರ್ಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಅವರಿಗೆ "ಸಮಾಜ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ' ಲಭಿಸಿದೆ.
ಗಣರಾಜ್ಯೋತ್ಸವ ಅಂಗವಾಗಿ ಹೆದ್ರಾಬಾದ್ನ ಬಿರ್ಲಾ ಮಂದಿರದ ಭಾಸ್ಕರ ಆಡಿಟೋರಿಯಂನಲ್ಲಿ ಜರುಗಿದ "7ನೇ ರಾಷ್ಟ್ರೀಯ ಡ್ಯಾನ್ಸ್ ಮತ್ತು ಮ್ಯೂಸಿಕ್ ಚಾಂಪಿಯನ್ಶಿ್- 2025' ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.
ಚಲನಚಿತ್ರ ನಿರ್ಮಾಪಕ ರಾಜು ಗಾರು, ಚಿತ್ರ ನಿರ್ದೇಶಕ ಎನ್.ಆರ್. ರೆಡ್ಡಿ ಗಾರು, ತೆಲಂಗಾಣಾ ರಾಜ್ಯ ಬಿಜೆಪಿ ಕೌನ್ಸಿಶಿಲ್ ಸದಸ್ಯ ರೊಯ್ಯುರು ಶೇಷಸಾಯಿ ಗಾರು, ಚತ್ರನಟ ಕಷ್ಣ ಕೊಟಕೊಂಡ, ಬೆಂಗಳೂರಿನ ಸ್ನೇಹ ಯುವ ಕಲ್ಚರ್ ಅಸೋಸಿಯೇಶನ್ ಅಧ್ಯ ರಂಜಿತಕುಮಾರ, ನಾಟ್ಯ ನಿರ್ದೇಶಕರಾದ ಡಾ. ನಿರ್ಮಲಾ ವಿಶ್ವೇಶ್ವರರಾವ್, ಡಾ. ವಿಜಯಲಕ್ಷಿ$್ಮ ಹರಿಕುಮಾರ ಹಾಗೂ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.