

ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಬಳಿ ಸ್ಮಾರ್ಟ್ ಟವರ್‌ನ ನೆಲ ಮಹಡಿಯಲ್ಲಿರುವ ಮೋನು ಎಂಟರ್ ಪ್ರೈಸಸ್ ಎದುರು ಜುಗಾರಿ ಆಡಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೋಟೆಕಾರು ಮಾಡೂರು ಗ್ರಾಮದ ಪ್ರವೀಣ್ (33), ಕುಡುಪು ನಡುಮನೆ ರಸ್ತೆ ನಿವಾಸಿ ಮನೋಜ್ ಜಾರ್ಜ್ ನೊರೊನ್ಹಾ (43), ಗೋರಿಗುಡ್ಡೆ ನೆಹರೂ ರಸ್ತೆ ನಿವಾಸಿ ರಾಕೇಶ್ (47) ಬಂಧಿತ ಆರೋಪಿಗಳು.
3 ಸಾವಿರ ರೂ. ನಗದು, 2 ಮೊಬೈಲ್, 2 ಕಂಪ್ಯೂಟರ್, ಆಟಕ್ಕೆ ಬಳಸಿದ್ದ ಪರಿಕರಗಳು ಸೇರಿದಂತೆ ಒಟ್ಟು 75 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.