ಮೂಲ್ಕಿಯಲ್ಲಿ ಮಟ್ಕಾ ದಾಳಿ, ಇಬ್ಬರ ಬಂಧನ

matka
Published on

ಮೂಲ್ಕಿ: ಮೂಲ್ಕಿ ಬಸ್ಸು ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಮೂಲ್ಕಿ ಪೊಲೀಸರು ದಾಳಿ ನಡೆಸಿ ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ ಮಂಜುನಾಥ್(27) ಎಂಬುವನನ್ನು ವಶಕ್ಕೆ ಪಡೆದು ಮಟ್ಕಾ ಜೂಜಾಟಕ್ಕಾಗಿ ಸಂಗ್ರಹಿಸಿದ್ದ 1100 ರೂ. ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲ್ಕಿ ಲಿಂಗಪ್ಪಯ್ಯಕಾಡಿನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದರ ಬಗ್ಗೆ ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಲಿಂಗಪ್ಪಯ್ಯ ಕಾಡು ನಿವಾಸಿ ಅಶೋಕ್(27) ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜೂಜಾಟಕ್ಕಾಗಿ ಸಂಗ್ರಹಿಸಿದ್ದ 1070 ರೂ. ಮತ್ತು ಪರಿಕರಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net