ಮಟ್ಕಾ ಜೂಜಾಟ; ವ್ಯಕ್ತಿ ವಿರುದ್ದ ಪ್ರಕರಣ ದಾಖಲು

Crime Logo
Published on

ಹಾವೇರಿ: ತಾಲೂಕಿನ ಕರ್ಜಗಿ ಪ್ಲಾಟ್​ ಗ್ರಾಮದ ಬಸ್​ ನಿಲ್ದಾಣ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜೂಜಾಟವಾಡುತ್ತಿದ್ದ ವ್ಯಕ್ತಿಯ ವಿರುದ್ದ ಎಫ್​ಐಆರ್​ ದಾಖಲಾಗಿದೆ.

ಕರ್ಜಗಿ ಪ್ಲಾಟ್​ ಗ್ರಾಮದ ಮೈನುದ್ದೀನ ರಾಜೇಸಾಬ್​ ಗುತ್ತಲ (38) ಎಂಬಾತನ ವಿರುದ್ದ ದೂರು ದಾಖಲಾಗಿದೆ. ಈತ ತನ್ನ ಪಾಯಿದೆಗೋಸ್ಕರ ರಸ್ತೆಯಲ್ಲಿ ಓಡಾಡುವವರನ್ನು ಕರೆದು ಒಂದು ರೂ. ಗೆ 80 ರೂ.ಕೊಡುವುದಾಗಿ ಕೂಗಿ ಕರೆಯುತ್ತಿದ್ದ. ಅಕ್ರಮ ಚಟುವಟಿಕೆ ಮಟ್ಕಾ ಜೂಜಾಟವಾಡುತ್ತಿದ್ದನೆಂದು ಎಫ್​ಐಆರ್​ನಲ್ಲಿ ತಿಳಿಸಿದೆ. ಹಾವೇರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net