ಮಟ್ಕಾ ಬುಕ್ಕಿ ಬಂಧನ, ಚೀಟಿ ವಶ

Arrest Kaidhi
Published on

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಗ್ರಾಮದ ಸಮೀಪದ ಗುಡ್ಡದಲ್ಲಿ ಶನಿವಾರ ಮಟ್ಕಾ ಬುಕ್ಕಿಯೊಬ್ಬನನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಕತಿ ಗ್ರಾಮದ ಹಜರತ್‌ಅಲಿ ಮುಲ್ತಾನಿ (22) ಬಂಧಿತ ಯುವಕ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆತನ ಬಳಿಯಿದ್ದ ಹಣ ಮತ್ತು ಮಟ್ಕಾ ಚೀಟಿ ವಶಕ್ಕೆ ಪಡೆದಿದ್ದಾರೆ. ಮಟ್ಕಾ ಜೂಜಿನಲ್ಲಿ ತೊಡಗಿದ್ದ ಕೆಲವರು ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net