7 ದಿನದಲ್ಲಿ ಗಣಿತ ಕಲಿಕೆ ಶಿಬಿರ

Published on

ಹುಬ್ಬಳ್ಳಿ : ಏಳರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 7 ದಿನಗಳಲ್ಲಿ ಗಣಿತ ಕಲಿಯುವ ಪದ್ಧತಿ ಹೇಳಿಕೊಡುವ ವಿಶೇಷ ಶಿಬಿರವನ್ನು ಇಲ್ಲಿಯ ಮಂಜುನಾಥನಗರ 3ನೇ ಕ್ರಾಸ್ನಲ್ಲಿ ಏರ್ಪಡಿಸಲಾಗಿದೆ ಎಂದು ಭೈರವಿ ವಿದ್ಯಾ ಕೇಂದ್ರದ ನಿರ್ದೇಶಕ ಮಂಜುನಾಥ ಅಣ್ಣಿಗೇರಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ಹಾಗೂ ಸರಳವಾಗಿ ಗಣಿತ ಕಲಿಯುವ ಕೋರ್ಸ್ ಇದಾಗಿದೆ. ಗಣಿತವು ಕಠಿಣವಲ್ಲ ಎಂಬುದನ್ನು ಮಕ್ಕಳು ಹಾಗೂ ಪಾಲಕರಿಗೆ ಮನವರಿಕೆ ಮಾಡಲಾಗುತ್ತದೆ. ಇದರಿಂದ ಅವರಲ್ಲಿನ ಭಯ ದೂರವಾಗುತ್ತದೆ ಎಂದರು.

ಈಗಾಗಲೇ 18 ಬ್ಯಾಚ್ಗಳು ಮುಗಿದಿದ್ದು, 19ನೇ ಬ್ಯಾಚ್ ಏಪ್ರಿಲ್ 15ರಿಂದ ಮತ್ತು 20ನೇ ಬ್ಯಾಚ್ ಏ. 22ರಿಂದ ಏಳು ದಿನಗಳ ಕಾಲ ನಡೆಯಲಿದೆ. ಬೆಳಗ್ಗೆ 10.30 ಹಾಗೂ ಸಂಜೆ ಎರಡು ತಾಸು ಶಿಬಿರ ನಡೆಯಲಿದೆ ಎಂದು ಹೇಳಿದರು.

ಶಂಭುಲಿಂಗ ಹತಿರ್ಮಠ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net