‘ಆಡಿ ಕಲಿ ಮಾಡಿ ತಿಳಿ’ ಗಣಿತ ಪರಿಕಲ್ಪನೆಗಳ ಚಟುವಟಿಕೆ

mng- july 17- bokkapatna school
Published on

ಮಂಗಳೂರು: ಅಕ್ಷರ ಫೌಂಡೇಶನ್ ಬೆಂಗಳೂರು, ವಿದ್ಯಾಗಮ ಟ್ರಸ್ಟ್ ಸುರತ್ಕಲ್ ಮತ್ತು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ದಕ) ಸಹಯೋಗದಲ್ಲಿ ಮಂಗಳೂರು ಉತ್ತರ ವಲಯದ ಗಾಂಧಿನಗರ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ‘ಆಡಿಕಲಿ ಮಾಡಿ ತಿಳಿ’ ಗಣಿತ ಪರಿಕಲ್ಪನೆಗಳ ಚಟುವಟಿಕೆ ಆಧಾರಿತ ಪರಿಕಲ್ಪನೆಗಳ ಶಿಬಿರ ನಗರದ ಬೊಕ್ಕಪಟ್ಟಣ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು.


ಡಯಟ್ ಉಪನ್ಯಾಸಕಿ ಸುಮಂಗಳಾ, ಕ್ಷೇತ್ರ ಸಮನ್ವಯಾಧಿಕಾರಿ ಉಸ್ಮಾನ್. ಜಿ , ಪಾಲಿಕೆ ಸದಸ್ಯ ಜಗದೀಶ್ ಶೆಟ್ಟಿ, ಪ್ರಾಯೋಜಕರಾದ ವಾಸುದೇವ ಐತಾಳ್, ನವೀನ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನ್ ಶೆಟ್ಟಿ, ಸಿಆರ್‌ಪಿ ಸ್ವೀಟಿ ವೇಗಸ್ ಭಾಗವಹಿಸಿದ್ದರು.


ಸಂಪನ್ಮೂಲ ವ್ಯಕ್ತಿಗಳಾದ ರೋಸಲಿನ್ ಹಾಗೂ ಸುಕನ್ಯಾ ದೇವಿ ಗಣಿತ ಪರಿಕಲ್ಪನೆಗಳನ್ನು ಗಣಿತದ ಕಿಟ್ ಬಳಸಿ ತಿಳಿಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ಡ್ರೆಸಿಲ್ ಲಿಲ್ಲಿ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾಶಿಕ್ಷಕಿ ಸಾವಿತ್ರಿ ಪ್ರಸ್ತಾವನೆಗೈದರು.ವಾಸುದೇವ ಐತಾಳ ವಂದಿಸಿದರು. ಶಾಲಾ ಶಿಕ್ಷಕಿ ಕಲ್ಪನಾ, ಸ್ಟೆಲ್ಲಾ ಮೊರಾಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net