ಸಮಾಜದ ಏಳಿಗೆಗೆ ಮಠಗಳು ನಿರಂತರ ಶ್ರಮ

IMG-20241007-WA0127
ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಎನ್.ಆರ್.ಸಂತೋಷ್, ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಚಂದ್ರಶೇಖರ್, ಗಂಗಾಧರ್, ಯೋಗೀಶ್ ಇತರರಿದ್ದರು.
Published on

ಅರಸೀಕೆರೆ: ಸಮಾಜದ ಏಳಿಗೆಗಾಗಿ ಸರ್ಕಾರದ ಜತೆಗೆ ಮಠ, ಮಾನ್ಯಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಜೆಡಿಎಸ್ ಮುಖಂಡ ಎನ್. ಆರ್.ಸಂತೋಷ್ ಹೇಳಿದರು.

ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತ ಶ್ರೀ ಮಠದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಾಡಿನ ಉದ್ದಗಲಕ್ಕೂ ವ್ಯಾಪಿಸಿರುವ ಮಠಗಳು ಹಸಿದವರಿಗೆ ಅನ್ನ, ಅಕ್ಷರ, ಅರಿವೆ, ಆಶ್ರಯ ನೀಡುವ ಮೂಲಕ ಸರ್ಕಾರದ ಜತೆಗೆ ರಾಜ್ಯದ ಕಲ್ಯಾಣಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳು ಸಣ್ಣಪುಟ್ಟ ಮಠಗಳ ನೆರವಿಗೆ ಕೈ ಜೋಡಿಸಬೇಕು. ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡರು ಹತ್ತು ಲಕ್ಷ ರೂ. ಅನುದಾನ ನೀಡಿದ್ದು ಸಮುದಾಯ ಭವನದ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಭೂಮಿಪೂಜೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್ ಹಾಗೂ ಕೇಂದ್ರ ಸಚಿವರ ನೆರವು ಕೋರಲಿದ್ದು ಸುಸಜ್ಜಿತ ಭವನ ಕಟ್ಟಡ ಕಟ್ಟುವ ಕಾರ್ಯಕ್ಕೆ ಪ್ರಯತ್ನ ನಡೆಸಲಿದ್ದೇವೆ ಎಂದು ಭರವಸೆ ನೀಡಿದರು.

ಶ್ರೀ ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ, ಸಾರ್ವಜನಿಕರು ಹಾಗೂ ಭಕ್ತರ ಸಹಕಾರದಿಂದ ಭವ್ಯ ಭವನ ನಿರ್ಮಿಸಲಾಗುವುದು ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್, ಮಾಡಾಳು ಗ್ರಾಪಂ ಅಧ್ಯಕ್ಷ ಯೋಗೀಶ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯ ಶಿವದೇವ್, ಮಲ್ಲಿಕಾರ್ಜುನ, ಜಯದೇವ್, ನಂಜುಂಡಶೆಟ್ಟಿ,ಲೋಕೇಶ್ ಸೇರಿದಂತೆ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net