ನೇರಳಕುಪ್ಪೆ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನ

5hangodu 2.
Published on

ಹನಗೋಡು: ನೇರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಅಕ್ಷರ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ನೇರಳಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಸುರೇಶ್ ಉದ್ಘಾಟಿಸಿದರು.

ಮಕ್ಕಳಲ್ಲಿ ಗಣಿತದ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಕಾರ್ಯಕ್ರಮಗಳ ಆಯೋಜನೆ ಹೆಚ್ಚು ಉಪಯುಕ್ತವಾಗಿದೆ ಎಂದರು. ಗಣಿತ ಕುರಿತು ಆಯೋಜಿಸಿದ್ದ ಸ್ಪರ್ಧೆಯಲ್ಲಿ ನೇರಳಕುಪ್ಪೆ ಶಾಲೆಯ ಲಿಖಿತ್, ಯಶ್ವಂತ್, ಅಬ್ಬೂರು ಶಾಲೆಯ ಸೃಷ್ಟಿ, ನಮ್ರತಾ, ಶೆಟ್ಟಳ್ಳಿ ಶಾಲೆಯ ವೈಷ್ಣವಿ, ಪ್ರಜ್ಞಾ, ಸಿಂಡೇನಹಳ್ಳಿ ಶಾಲೆಯ ಕೌಸ್ತುಭಗೌಡ, ಧನುಶೀ, ನೇಗತ್ತೂರು ಶಾಲೆಯ ಚೈತನ್ಯ ಬಹುಮಾನ ಪಡೆದುಕೊಂಡರು.

ಪಿಡಿಒ ದೇವರಾಜ್, ಶಿಕ್ಷಣ ಇಲಾಖೆಯ ಇಸಿಒ ಕೇಶವಮೂರ್ತಿ, ಸಿಆರ್‌ಪಿ ಧರ್ಮರಾಜ್, ಮುಖ್ಯಶಿಕ್ಷಕ ಸ್ವಾಮಿ, ಸಹ ಶಿಕ್ಷಕ ಗಂಗರಾಜ್, ಛಾಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net